
ಮೂಡಿಗೆರೆ: ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವ ಮೂಲಕ ಸರ್ಕಾರ ಪಶ್ಚಿಮ ಘಟ್ಟದ ಆಸುಪಾಸಿನಲ್ಲಿ ವಾಸಿಸುತ್ತಿರುವ ಜನರ ನೆರವಿಗೆ ಬರಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಎಂ.ಕೆ. ಪ್ರಾಣೇಶ್ ಆಗ್ರಹಿಸಿದರು.
ಕಸ್ತೂರಿ ರಂಗನ್ ವರದಿ ಜಾರಿ ವಿರೋದಿಸಿ. ಬಾಳೂರಿನಲ್ಲಿ ನಡೆದ ರಸ್ತೆ ತಡೆ, ಜಾತದ ನಂತರ ನಡೆದ ಸಭೆ ಉದ್ದೇಶಿಸಿ ಮಾತನಾಡಿ. ನಮಗೆ ಸಂಕಷ್ಟ ಬಂದಾಗ ಹೋರಾಟವೆ ದಾರಿಯಾಗಿದ್ದು ನಮ್ಮಲ್ಲಿ ಒಡಕು ಇಲ್ಲದೆ ಹೋರಾಟ ಮಾಡಬೇಕಾಗಿದೆ. ನಮ್ಮ ಹಳ್ಳಿ ಗ್ರಾಮಕ್ಕೆ ಇಲ್ಲ ಎಂಬ ಬಾವನೆ ಕೆಲವರಲ್ಲಿ ಇರುತ್ತೆ. ಮುಂದೆ ಇದು ಎಲ್ಲಡೆ ವ್ಯಾಪಕವಾಗಿ ಹರಡುತ್ತದೆ. ಮರ ಇರುವಡೆ ಎಲ್ಲಾ ಅನ್ವಯಕ್ಕೆ ಬರಬಹುದು. ಇಂದೆ ಎಚ್ಚೇಳದಿದ್ದರೆ ಸಮಸ್ಯೆ ಖಚಿತ ಮಲೆನಾಡಿಗರ ಮೇಲೆ ಅನೇಕ ಅವರ ಪರಿಸರದ ಮೇಲೆ ಅನೇಕ ಸರ್ವೆ ಸಂಶೋದನೆ ನಡೆಯುತ್ತಿದ್ದು ನಮ್ಮ ಬದುಕು ಶಾಶ್ವತವಲ್ಲ ಎಂಬ ಭಾವನೆ ಬರುತ್ತಿದೆ. ಎಲ್ಲೋ ಕಚೇರಿಯಲ್ಲಿ ಕುಳಿತ ಅಧಿಕಾರಿಗಳು ನಿರ್ದರಿಸುವ ಕಾಲ ಹೋಗಿ ವ್ಯೆಜ್ಞಾನಿಕ ವರಧಿ ಮೂಲಕ ಇಲ್ಲಿ ಜನರ ಬದುಕು ಸರ್ಕಾರ ಕಟ್ಟಿಕೊಡಬೇಕು ಎಂದರು.
ಕಾಪಿ ಮಂಡಲಿ ಅದ್ಯಕ್ಷ ದಿನೇಶ್ ಮಾತನಾಡಿ. ಕಾಪಿ ಮಂಡಳಿಯಂತ ಚಿಕ್ಕ ಸಂಸ್ಥೆ ಕಾಪಿಬೆಳೆ ಪ್ರದೇಶದಲ್ಲಿ ಪ್ರತಿ ಬೆಳೆಗಾರನ ತೋಟದಲ್ಲಿ ಇಂದು ಎಷ್ಟು ಮರ. ಹಸಿರು ಇದೆ ಮತ್ತು ಮುಂದಿನ 5ವರ್ಷದಲ್ಲಿ ನೋಡಿದರೆ ಎಷ್ಟು ಹಸಿರಿದೆ ಎಂಬ ತಂತ್ರಜ್ಞಾನ ತಂದಿರಬೇಕಾದರೆ ಇಂದಿನ ಸರ್ಕಾರ ಕಾಡು ಮತ್ತು ನಾಡನ್ನ ಬೇರೆ ಮಾಡಲು ಈಗೀನ ಅದುನಿಕ ಯುಗದಲ್ಲಿ ಎಕೆ ಸಾದ್ಯವಿಲ್ಲ.ಎಂದ ಇವರು ತೋಟ ಮತ್ತು ಕಾಡನ್ನ ಕೂಡಲೆ ಬೆರ್ಪಡಿಸಿ ಕೇರಳ ಮಾದರಿಯಲ್ಲಿ ವರದಿ ಕ್ಯೆ ಬಿಡಬೇಕು ಎಂದು ಅಗ್ರಹಿಸಿದರು.
ಕಾರ್ಯಕ್ರಮದಲ್ಲಿ ಬೆಳೆಗಾರ ಸಂಘದ ಅದ್ಯಕ್ಷ ಬಾಲಕೃಷ್ಣ ಬಾಳೂರು. ಭರತ್ ಬಾಳೂರು. ರೈತ ಮತ್ತು ಬೆಳೆಗಾರರ ಹಿತರಕ್ಷಣೆ ಅದ್ಯಕ್ಷ ವಿಜಯ್ ಕುಮಾರ್. ಲಕ್ಷಣಗೌಡ. ವಿಭಾ ಸುಶ್ಮಾ. ಶ್ರೀನಾಥ್. ಕಲ್ಲೇಶ್. ಮನೋಜ್. ನಯನ ತಳವಾರ. ಮಂಜುನಾಥ್. ಬಾಳೂರು ಮತ್ತಿತರರಿದ್ದರು.





