
ನರಸಿಂಹರಾಜಪುರ: ಬೆರಳ ತುದಿಯಲ್ಲಿ ಇರುವ ಪ್ರಪಂಚವನ್ನು ನೈತಿಕತೆಯ ಮೇಲೆ ಬಲಿಷ್ಠವಾಗಿ ಕಟ್ಟುವ ಮಹತ್ವದ ಕಾರ್ಯ ಗುರುವೃಣದಿಂದ ಮಾತ್ರ ಸಾಧ್ಯ.. ನಿಮ್ಮ ಬೋಧನೆಯ, ಅಧ್ಯಯನದ , ಅನುಭವದ ಎಲ್ಲಾ ವಿಚಾರಧಾರೆಗಳು ಉತ್ತಮ ಪ್ರಜೆಗಳನ್ನ ನಿರ್ಮಿಸಿ ಆ ಮೂಲಕ ಸುಂದರವಾದ ಭಾರತವನ್ನು ಭವ್ಯವಾಗಿ ಕಟ್ಟೋಣ .. ಪವಿತ್ರವಾದ ಹುದ್ದೆಯಲ್ಲಿ ಇರುವ ಗುರುಗಳಾದ ತಾವು ಈ ಬೆಲೆಕಟ್ಟಲಾಗದ ಕಾರ್ಯಕ್ಕೆ ತ್ಯಾಗಿಗಳಾಗಿ, ಚಿಂತಕರಾಗಿ ಕೈ ಜೋಡಿಸಿ ಸಹಕರಿಸಬೇಕಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಜೆ ಜಾರ್ಜ್ ನರಸಿಂಹರಾಜಪುರದಲ್ಲಿ ಜಿಲ್ಲಾ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ರವರು ಸರ್ವಕಾಲಿಕ ಮಾದರಿಯಾಗಿದ್ದಾರೆ ಎಂದರು.
ಮುಖ್ಯ ಉಪನ್ಯಾಸ ನೀಡಿದ ಉಪನ್ಯಾಸಕ ಶ್ರೀಪತಿ ಹಳಗುಂದ ಯು.ಎಮ್ ಮಾತನಾಡಿ ಇಂದು ಸತ್ಯ ಜಗತ್ತನ್ನು ದಾಟುವುದರೊಳಗಾಗಿ ಸುಳ್ಳು ,ಅನಾಚಾರಗಳು ಜಗತ್ತನ್ನು ದಾಟಿ ಹೋಗುತ್ತಿವೆ. ವಿವಿಧ ಮೂಲಗಳಿಂದ ಕಲುಷಿತ ವಾಗುತ್ತಿರುವ ಪ್ರಸ್ತುತ ವಾಗುತ್ತಿರುವುದರಿಂದ ದೇಶವನ್ನು ಸರಿದಾರಿಗೆ ತರುವ ಏಕೈಕ ಶಕ್ತಿ ಶಿಕ್ಷಕನಾಗಿದ್ದಾನೆ. ರಾಷ್ಟ್ರದ ಭಾವನೆಗಳನ್ನು ಅರಳಿಸುವ ಬದಲು ಕೆರಳಿಸುತ್ತಿದ್ದೇವೆ. ಇದಕ್ಕೆ ಅದ್ಬುತ ಪರಿಹಾರವೇ ಶಿಕ್ಷಣ… ಅದರ ಮೂಲಕ ರೂಪ ನಿರ್ಮಾಣ ಮಾಡುತ್ತಿರುವ ಶಿಕ್ಷಕ. ಮಂತ್ರಕ್ಕಿಂತ ಮಾತಿಗೆ ಹೆಚ್ಚು ಶಕ್ತಿ ಇದೆ ಎಂಬುದನ್ನು ತೋರಿಸಿ ಕೊಟ್ಟ ಶಿಕ್ಷಕ ಸಮುದಾಯಕ್ಕೆ ನಾವು ಸದಾ ಋಣಿಗಳಾಗಿರಬೇಕಾಗುತ್ತದೆ.
ನಮ್ಮ ಎದುರು ಕಾಮ, ಕ್ರೋಧ, ಅರಿ ಷಡ್ವರ್ಗಗಳ ಏನೂ ಅರಿವಾಗದ ಒಂದು ಮುಗ್ಧ ಪ್ರಪಂಚ ನಮ್ಮ ಮುಂದಿದೆ. ಅಂತಹ ಮುಗ್ಧ ಪ್ರಪಂಚಕ್ಕೆ ನಾವು ಮುನ್ನೆಡೆಸುವ ಮೌಲ್ಯಯುತ ನಾಯಕರಾಗೋಣ ಎಂದರು. ಕಾರ್ಯಕ್ರಮದಲ್ಲಿ ಶಾಸಕರಾದ ಟಿ. ಡಿ ರಾಜೆ ಗೌಡ , ಜಿಲ್ಲಾ ಉಪ ನಿರ್ದೇಶಕ ತಿಮ್ಮರಾಜು, ಸುಂದರೇಶ್, ಶಬಾನಾ ಅಂಜುಮ್ ಉಪಸ್ಥಿತಿ ಇದ್ದರು.





