
ಜಯಪುರ : ಕೊಪ್ಪ ಸಂತ ಸಿಸಿಲಿಯಾ ಸಂಗೀತ ಶಾಲೆ ವಿದ್ಯಾರ್ಥಿಗಳು ಟ್ರಿನಿಟಿ ಕಾಲೇಜ್ ಲಂಡನ್ ಸಂಗೀತ ಸಿದ್ಧಾಂತ (Music Theory) ಪರೀಕ್ಷೆ–2026ರಲ್ಲಿ ಶೇ.100 ಫಲಿತಾಂಶ ದಾಖಲಿಸಿ ಶಾಲೆಗೆ ಹೆಮ್ಮೆ ತಂದಿದ್ದಾರೆ.
ಪರೀಕ್ಷೆಯಲ್ಲಿ ಧನ್ವಿ ಜಿ. 81 ಅಂಕ ಹಾಗೂ ಸ್ಮಯಾ ಎಂ. ಕಾಂತ್75 ಅಂಕವನ್ನು ಪಡೆದು ಪ್ರಥಮ ಮೆರಿಟ್ ಪಡೆದಿರುತ್ತಾರೆ. ವಿನಾಯಕ ಎನ್. 67 ಅಂಕ, ಹಾಗೂ ಭವ್ಯ ಕೀರ್ತಿ ಜಿ. 67 ಅಂಕಗಳನ್ನು ಪಡೆದು ಮೆರಿಟ್ ಗಳಿಸಿ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.




