
ಜಯಪುರ: ಕೊಪ್ಪದ ಸಂತ ಸಿಸಿಲಿಯಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಟ್ರಿನಿಟಿ ಕಾಲೇಜ್ ಲಂಡನ್ ನಡೆಸಿದ ಸಂಗೀತ ಸಿದ್ಧಾಂತ (Music Theory) ಪರೀಕ್ಷೆ–2026ರಲ್ಲಿ ಶೇ.100 ಫಲಿತಾಂಶ ದಾಖಲಿಸಿ ಶಾಲೆಗೆ ಹೆಮ್ಮೆ ತಂದಿದ್ದಾರೆ. ಪರೀಕ್ಷೆಯಲ್ಲಿ ಧನ್ವಿ ಜಿ. 81 ಅಂಕಗಳನ್ನು ಹಾಗೂ ಸ್ಮಯಾ ಎಂ. ಕಾಂತ್ 75 ಅಂಕಗಳನ್ನು ಪಡೆದು ಪ್ರಥಮ ಮೆರಿಟ್ ಗಳಿಸಿದ್ದು, ವಿನಾಯಕ ಎನ್. 67 ಅಂಕ ಮತ್ತು ಭವ್ಯ ಕೀರ್ತಿ ಜಿ. 67 ಅಂಕಗಳನ್ನು ಪಡೆದು ಮೆರಿಟ್ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆಯು ಶಾಲೆಯ ಶೈಕ್ಷಣಿಕ ಹಾಗೂ ಸಂಗೀತ ಕ್ಷೇತ್ರದ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಈ ಯಶಸ್ಸಿಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.





