ಚಾಮರಾಜನಗರ: ನಾಡಿನ ಪ್ರತಿ ಮನೆ ಮನೆಯಲ್ಲಿ ಶ್ರೀವರಮಹಾಲಕ್ಷ್ಮಿ ವ್ರತ ಆಚರಿಸುವ ಮೂಲಕ ಶಾಂತಿ, ನೆಮ್ಮದಿ, ಸುಖ, ಐಶ್ವರ್ಯ ನೆಲಸಲಿ ಎಂದು ನಾಡಿನ ಪ್ರಸಿದ್ಧ ವೇದ ವಿದ್ವಾಂಸರಾದ ಶ್ರೀರಂಗಪಟ್ಟಣದ ಡಾ. ಭಾನುಪ್ರಕಾಶ್ ಶರ್ಮ ರವರು ತಿಳಿಸಿದರು. ಅವರು ನಗರದ ಋಗ್ವೇದಿ ಕುಟೀರದಲ್ಲಿ ಜರುಗಿದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಸರ್ವ ಭಕ್ತರಿಗೂ ಆಶೀರ್ವಾದ ಹಾಗೂ ವರಮಹಾಲಕ್ಷಿ ವ್ರತದ ಮಹತ್ವವನ್ನು ತಿಳಿಸುತ್ತ ಶ್ರಾವಣ ಮಾಸದ ಎರಡನೇ ಶುಕ್ರವಾರ ನಡೆಯುವ ಶ್ರೀ ವರಮಹಾಲಕ್ಷ್ಮಿ ವ್ರತವು ಸಮೃದ್ಧಿಯ ಐಶ್ವರ್ಯದ, ಆರೋಗ್ಯ ಸಂಪತ್ತಿನ ನೆಲೆಗೊಳ್ಳುವ ಮೂಲಕ ಪ್ರತಿ ಕುಟುಂಬವು ನೆಮ್ಮದಿಯನ್ನು ಕಾಣಬೇಕು. ಮಹಾಲಕ್ಷ್ಮಿ ವ್ರತವು ಅಷ್ಟೈಶ್ವರ್ಯಗಳನ್ನು ನೀಡುವ ಜೊತೆಗೆ ಮಾನವ ಕಲ್ಯಾಣದ ಮತ್ತು ಸರ್ವ ಜನರ ಸುಖವನ್ನು ಉಂಟು ಮಾಡಿ ವಿಶ್ವದಲ್ಲಿ ಶಾಂತಿ ನೆಮ್ಮದಿ ದೊರೆಯುವಂತೆ, ಮಾನವ ಪ್ರತಿಯೊಬ್ಬರನ್ನು ಗೌರವಿಸಿ ಪ್ರೀತಿಸಿ ಸಂತೋಷದಿಂದ ಬಾಳ್ವೆ ನಡೆಸಲು ಸಹಕಾರಿಯಾಗುವುದು. ಹಬ್ಬಗಳೆ ಮನಸ್ಸಿನ ಸಂತೋಷದ ಕ್ಷಣಗಳಾಗಿವೆ. ಹಬ್ಬಗಳಿಂದ ಮನುಷ್ಯ ಸುಮಧುರವಾದ ಬಾಂಧವ್ಯವನ್ನು, ಪರಸ್ಪರ ಪ್ರೀತಿ ವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಾನೆ. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ವಿಶೇಷ. ಪ್ರತಿಮಾಸದಲ್ಲೂ ವಿಶೇಷ ಭಗವಂತನ ಪೂಜೆ ಪುನಸ್ಕಾರಗಳು ಹೋಮಗಳು ಎಲ್ಲೆ ಜರಗುತ್ತವೆ. ದೇವಸ್ಥಾನಗಳ ಭೇಟಿ, ಪುಣ್ಯ ಸ್ಥಳಗಳ ಸಂದರ್ಶನ,ಪ್ರಕೃತಿಯ ದರ್ಶನ, ಪುಣ್ಯ ಸ್ನಾನ ಎಲ್ಲವೂ ಮಾನವ ಕಲ್ಯಾಣಕ್ಕಾಗಿ ನಡೆಯುತ್ತಿದೆ. ಪುರಾತನ ಕಾಲದಿಂದಲೂ ನಡೆಯಲ್ಪಡುವ ಧಾರ್ಮಿಕ ಆಚರಣೆಗಳಾಗಿದೆ.ಯುವ ಜನಾಂಗ ಧರ್ಮಾನುಸ್ಟಾನದ ಮೂಲಕ ಗುರು ಹಿರಿಯರಿಗೆ, ತಂದೆ ತಾಯಿಗಳಿಗೆ, ಶ್ರದ್ಧೆ ಭಕ್ತಿಯಿಂದ ಸಮಾಜವನ್ನು ಪ್ರೀತಿಯಿಂದ ಕಾಣುವ ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಎನ್ನುವಂತೆ ಸರ್ವರಲ್ಲೂ ಭಗವಂತನನ್ನು ಕಾಣಬೇಕು ಎಂದು ತಿಳಿಸುತ್ತಾ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ನಿರಂತರವಾದ. 3000ಕ್ಕೂ ಹೆಚ್ಚು ಕಾರ್ಯಕ್ರಮಗಳು, ಪೂಜಾ ಅನುಷ್ಠಾನಗಳು,ಯತಿಗಳ ಸಂದರ್ಶನ, ಭಜನೆ, ಪ್ರವಚನ, ಉಪನ್ಯಾಸಗಳು ನಡೆಯುತ್ತಿದೆ. ಪ್ರತಿ ಮನೆಯೂ ಧರ್ಮದ ಕೇಂದ್ರವಾಗಬೇಕು. ಪ್ರತಿ ವ್ಯಕ್ತಿಯಲ್ಲೂ ಬದಲಾವಣೆಯ ತರುವ ಶಕ್ತಿ ಕಾರ್ಯಕ್ರಮ ಮತ್ತು ಸಮಾರಂಭಗಳಲ್ಲಿ ಆಗುತ್ತದೆ.ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಆಶೀರ್ವದಿಸಿದರು. ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಪ್ರಸಿದ್ಧ ವೇದ ವಿದ್ವಾಂಸರು ಹಾಗೂ ಜ್ಯೋತಿಷಿಗಳಾದ ಭಾನುಪ್ರಕಾಶ್ ಶರ್ಮಾ ರವರು ಇಂದು ಚಾಮರಾಜನಗರಕ್ಕೆ ಆಗಮಿಸಿ ಉಪನ್ಯಾಸ ನೀಡಿ ಆಶೀರ್ವಾದ ಮಾಡಿರುವುದು ಬಹಳ ಸಂತೋಷ. ಧರ್ಮದ ಅನುಷ್ಠಾನ ಧರ್ಮದ ಜಾಗೃತಿಗಾಗಿ ಡಾ. ಭಾನುಪ್ರಕಾಶ್ ಶರ್ಮ ರವರು ದೇಶ ವಿದೇಶಗಳಲ್ಲಿ ಜಾಗೃತಿಯ ಕಾರ್ಯಕ್ರಮವನ್ನು ಮಾಡುತ್ತಾ ಭಾರತದ ಸನಾತನ ಧರ್ಮವನ್ನು ಕಾಪಾಡುವ ಅಪರೂಪದ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ , ಶ್ರೀರಂಗಪಟ್ಟಣದ ಶಾಶ್ವತಿ ಧರ್ಮ ಸಭಾ ನಿತ್ಯ ಅನ್ನದಾಸೋಹದ ಕೇಂದ್ರವಾಗಿದೆ. ಕರ್ಮಾನು ಸ್ಥಾನಗಳನ್ನು ಶ್ರದ್ಧೆ ಭಕ್ತಿಯಿಂದ ನಡೆಸುತ್ತಿರುವ ಭಾನುಪ್ರಕಾಶ್ ಶರ್ಮಾ ರವರು ಈ ಭಾಗದ ಪ್ರಸಿದ್ಧ ವೇದ ವಿದ್ವಾಂಸರಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ ಬ್ರಾಹ್ಮಿ ಮಹಿಳಾ ಸಂಘದ ವತ್ಸಲಾ ರಾಜಗೋಪಾಲ್ ಶಾರದಾ ಭಜನಾ ಮಂಡಳಿಯ ವಾಣಿಶ್ರೀ, ಸರಸ್ವತಿ, ಋಗ್ವೇದಿ ಯೂತ್ ಕ್ಲಬ್ ನ ಶ್ರಾವ್ಯ ಋಗ್ವೇದಿ, ಸಾನಿಕ ರವಿ, ಆಶಾ, ಅಂಜಲಿ ಮುಂತಾದವರು ಇದ್ದಾರೆ.
