
ಕೊಳ್ಳೇಗಾಲ : ಪ್ಲಾಸ್ಟಿಕ್ ಪರಿಸರಕ್ಕೆ ದೊಡ್ಡ ಹೆಮ್ಮಾರಿಯಾಗಿದ್ದು, ಅದರ ಬಳಕೆಯಿಂದ ಅತಿಯಾದ ಪರಿಸರ ಮಾಲಿನ್ಯವಾಗುತ್ತಿದೆ ಎಂದು ನಿಸರ್ಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಪ್ರಾಂಶುಪಾಲರಾದ ಡಾ. ಜಗದೀಶ ತಿಳಿಸಿದರು.
ಕೊಳ್ಳೇಗಾಲ ತಾಲ್ಲೂಕಿನ, ಸಿದ್ದೇಶ್ವರ ಬೆಟ್ಟದಲ್ಲಿ,ಬಿ. ಆರ್. ಟಿ. ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ,ಕೊಳ್ಳೇಗಾಲ ವನ್ಯಜೀವಿ ವಲಯ, ಮಾನಸ ಶಿಕ್ಷಣ ಸಂಸ್ಥೆ, ನಿಸರ್ಗ ಇನ್ಸ್ ಟಿ ಟ್ಯೂಟ್ ಆಫ್ ಎಜುಕೇಷನ್ , ಕೊಳ್ಳೇಗಾಲ ರವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜನ ಜಾಗೃತಿ ಹಾಗೂ ಪ್ಲಾಸ್ಟಿಕ್ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಏಕ ಬಳಕೆಯ ಪ್ಲಾಸ್ಟಿಕ್ ಅನ್ನು, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೇ ಎಲ್ಲೆಂದರಲ್ಲಿ ಬಿಸಾಕುತ್ತಿದ್ದು, ಅದು ನೆಲ, ಜಲ,ಮತ್ತು ವಾಯು ವಿನಲ್ಲಿ ವಿಲೀನಗೊಂಡು ವಿಷಕಾರಿ ಅಂಶವಾಗಿ ಪರಿವರ್ತನೆಯಾಗುತ್ತಿದೆ ಆದುದರಿಂದ ಏಕಮುಖ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಪೂರಕವಾದ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಸದೆ ಬಟ್ಟೆಯ ಚೀಲಗಳನ್ನು ಬಳಸುವುದು, ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ನಲ್ಲಿ ಸಂಸ್ಕರಿಸದೆ, ಸ್ಟೀಲ್ ಬಾಕ್ಸ್ ನಲ್ಲಿ ಹಾಕಿ ಉಪಯೋಗಿಸಬೇಕು, ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿದೆ, ಹೇಳಿದರು. ಸಿದ್ದೇಶ್ವರ ಬೆಟ್ಟದಲ್ಲಿ ಒಟ್ಟು 40 ಚೀಲಗಳ ಪ್ಲಾಸ್ಟಿಕ್ ಅನ್ನು ಸಂಗ್ರಹಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಮಧು ಮಾಲಿನಿ,ಮಾತನಾಡಿ “ದೇವಸ್ಥಾನದ ಆಡಳಿತ ಮಂಡಳಿಯವರು, ಪ್ಲಾಸ್ಟಿಕ್ ಅನ್ನು ಸಂಗ್ರಹಿಸಲು ಅಲ್ಲಲ್ಲಿ,ಸಂಗ್ರಹದ ಬುಟ್ಟಿಯ ಇಡಬೇಕು ಮತ್ತು, ಸಂಗ್ರಹ ಗೊಂಡ ಪ್ಲಾಸ್ಟಿಕ್ ಅನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು, ಪ್ಲಾಸ್ಟಿಕ್ ನಿಂದ ಆಗುವ ಅನಾನುಕೂಲಗಳ ಬಗ್ಗೆ ಫಲಕಗಳನ್ನು ಅಳವಡಿಸಬೇಕು “ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಾಸು ಬಿ. ಎಸ್. ವಲಯ ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸದರಿ ಕಾರ್ಯಕ್ರಮವನ್ನು ಆಯೋಗಿಸಲಾಗಿತ್ತು. ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಮ್ಮ ಎಸ್. ಸತೀಶ್ ಜಿ.ಎನ್. ಕೃಷ್ಣಮೂರ್ತಿ, ಅಮಿತ್ ಕುಮಾರ, ಕುಮಾರಿ ಭೂಮಿಕಾ, ಪ್ರಶಿಕ್ಷಣಾರ್ಥಿಗಳು, ಸುನಿಲ್ ಬಸಪ್ಪ ಬೆಳವಿ, ರಾಜು ಎಸ್, ಬಸವರಾಜ ಹಬ್ಬದ, ಗಸ್ತು ಅರಣ್ಯಪಾಲಕರುಗಳು , ಆಕಾಶ್ ಸೋಪನಾ ಜೋಶಿ, ಅರಣ್ಯ ವೀಕ್ಷಕ, ಅರಣ್ಯ ಇಲಾಖೆಯ ಮುಕುಂದ, ಗೋವಿಂದ,ಶೇಖರ್, ಸತೀಶ್ ಸಂತೋಷ, ಜಯದೇವ,ರವಿ ಕುಮಾರ್, ಮಹೇಶ್ ಕುಮಾರ್, ಆನಂದ್, ಸುರೇಶ್, ಮಹೇಶ, ವಿಶಾಲ್ ಕುಮಾರ್,ಸುರೇಶ್,ಧನುಸ್ಸು,ಸಿಬ್ಬಂದಿ ವರ್ಗ ಹಾಜರಿದ್ದರು.




