
ಚನ್ನಗಿರಿ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪೇಪರ್ ಲೆಸ್ ಮತ್ತು ಪತ್ರ ಬರಹಗಾರರು ವೃತ್ತಿಯಲ್ಲಿ ಭದ್ರತೆ ಇಲ್ಲದಂತಾಗಿದ್ದು ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕೆಂದು ಪತ್ರ ದಸ್ತಾವೇಜು ಬರದಾರರ ಸಂಘದ ಅಧ್ಯಕ್ಷ ರಾಜಗೊಂಡನಹಳ್ಳಿ ಬಸವರಾಜ್ ಹೇಳಿದರು. ಚನ್ನಗಿರಿ ತಾಲೂಕಿನ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಪೇಪರ್ ಲೆಸ್ ಮತ್ತು ದಸ್ತಾವೇಜು ಬರಹಗಾರ ಬಿಕ್ಕಲಂ ಸಹಿ ಹಾಕುವುದನ್ನು ಅನುಮೋದನೆ ಮಾಡಬೇಕೆಂದು ಎಂದು ಹೇಳುತ್ತಾ ಪೇಪರ್ ಲೆಸ್ ನೋಂದಣಿಯನ್ನು ವಜಾ ಮಾಡಿ ಪತ್ರ ಬರಹಗಾರರಿಗೆ ಪ್ರತ್ಯೇಕವಾದ ಲಾಹಿನ್ ನೀಡಬೇಕು ಒತ್ತಾಯಿಸಿದರು. ಹಿರಿಯ ದಸ್ತಾವೇಜು ಬರಗಾರರು ಕೆ ಆರ್ ಮಂಜುನಾಥ್ ಮಾತನಾಡಿ ರಾಜ ಮಹಾರಾಜರ ಕಾಲದಿಂದಲೂ ಸ್ಟಾಂಪ್ ಪೇಪರ್ ಗಳ ಮೇಲೆ ಆಸ್ತಿ ಗಳ ನೋಂದಣಿಗಳಾಗುತ್ತಿದ್ದವು ಆದಕ್ಕೂಂದು ಮಹತ್ವ ಇರುತ್ತಿತು ಎಂದರು. ಪೇಪರ್ ಲೆಸ್ ನೋಂದಣಿಯಿಂದ ಆಸ್ತಿ ಖರೀದಿದಾರಿಗೇ ಮಾರಾಟಗಾರಿಗೇ ಭದ್ರತೆ ಇಲ್ಲದಂತಾಗಲಿದೆ ಎಂದರು. ಪತ್ರ ಬರಹಗಾರರಾದ ಬಾಲಸುಬ್ರಹ್ಮಣ್ಯ ಶಿವಲೀಂಗ ಸ್ವಾಮಿ ಭೈರಪ್ಪ ಶೆಟ್ಟಿಹಳ್ಳಿ ನಾಗರಾಜ್ ನೀತಿಗೆರೆ ಜಯಣ್ಣ ಶೇಕ್ ಇಸ್ಮಾಯಿಲ್ ರಮೇಶ್ ಹಾಲಪ್ಪ ಸಿ ಪತ್ರ ಬರಹಗಾರ ಸಂಘದ ಎಲ್ಲಾ ಸದಸ್ಯರು ಹಾಜರಿದ್ದರು.
ವರದಿ: ಕುಳೇನೂರು ಅರುಣ್ ಕುಮಾರ್ ಎ ಚನ್ನಗಿರಿ




