
ಗುಜರಾತ್ ರಾಜ್ಯದ ಬಿಜೆಪಿ ಸಹ-ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಸಂಘಟನಾ ಚತುರ ಅರುಣ್ ಬಿನ್ನಡಿ ಅವರನ್ನು ಅವರ ನಿವಾಸದಲ್ಲಿ ಇಂದು ಆತ್ಮೀಯವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಬಣಕಲ್ ಹೋಬಳಿ ಅಧ್ಯಕ್ಷ ಯತೀಶ್ ಕೂಡಹಳ್ಳಿ, ಪ್ರಧಾನ ಕಾರ್ಯದರ್ಶಿ ಶರತ್ ಫಲ್ಗುಣಿ, ಜಿಲ್ಲಾ ಸಮಿತಿ ಸದಸ್ಯ ವಿಕ್ರಂ ಬಣಕಲ್ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರು ಅರುಣ್ ಬಿನ್ನಡಿ ಅವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಹೋಬಳಿ ಉಪಾಧ್ಯಕ್ಷರಾದ ಚಂದ್ರೇಗೌಡ ಬಣಕಲ್, ಪ್ರದೀಪ್ ಬಿನ್ನಡಿ, ಮೋಹನ್ ಬೆಟ್ಟಗೆರೆ, ಟಿಎಪಿಸಿಎಂಎಸ್ ನಿರ್ದೇಶಕ ಪ್ರಸನ್ನ ಮುಗ್ರಹಳ್ಳಿ, ತಾಲೂಕು ಉಪಾಧ್ಯಕ್ಷ ಸುಂದರೇಶ್ ಕೊಣಗೆರೆ, ಸಾಮಾಜಿಕ ಜಾಲತಾಣ ಸಂಚಾಲಕ ಸುನಿಲ್ ಮಣ್ಣೀಕೆರೆ, ಅತ್ತಿಗೆರೆ ಬೂತ್ ಸಮಿತಿ ಅಧ್ಯಕ್ಷ ಸಾಗರ್ ತರುವೆ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸಂತೋಷ್ ಅತ್ತಿಗೆರೆ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




