
ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಮತ್ತೆ ಜೀವಕಳೆ ಬಂದಿದ್ದು, ಆಲಮಟ್ಟಿ ಡ್ಯಾಂ ಭರ್ತಿಗೆ ಕೇವಲ 1.02 ಮೀಟರ್ ಬಾಕಿ ಇದೆ. ಡ್ಯಾಂನಲ್ಲಿ 518.58ಮೀಟರ್ ನೀರು ಸಂಗ್ರಹವಾಗಿದ್ದು, 73162 ಕ್ಯೂಸೆಕ್ ಒಳಹರಿವು ಇದೆ. ಈ ವರ್ಷದ ಮೊದಲ ಬಾರಿಗೆ ಆಲಮಟ್ಟಿ ಕ್ರಸ್ಟ್ ಗೇಟ್ಗಳನ್ನು ಓಪನ್ ಮಾಡಲಾಗಿದ್ದು, 26 ಗೇಟ್ಗಳಲ್ಲಿ 14 ಕ್ರಸ್ಟ್ ಗೇಟ್ಗಳನ್ನು ತೆರೆಯಲಾಗಿದೆ. ಮಹಾರಾಷ್ಟ್ರ ಹಾಗೂ ಕೃಷ್ಣಾ ಕಣಿವೆಯಲ್ಲಿ ಉತ್ತಮ ಮಳೆ ಪರಿಣಾಮ ನದಿಪಾತ್ರದ ಜನರಿಗೆ ಜಿಲ್ಲಾಡಳಿತದಿಂದ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.




