
ಮೈಸೂರು: ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಹೆಬ್ಬಾಳದ ಪ್ಯಾರಾಮೌಂಟ್ ಮುಂಭಾಗ ಭಾರತದ ಬಾಹ್ಯಾಕಾಶ ದಿನವನ್ನು ಆಚರಿಸಲಾಯಿತು. ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಉದ್ಘಾಟನೆ ಮಾಡಿದ ಜೈ ಹಿಂದ್ ಪ್ರತಿಷ್ಠಾನದ ಉಪಾಧ್ಯಕ್ಷರು ಹಾಗೂ ಶಿಕ್ಷಕರಾದ ಶ್ರೀಮತಿ ವಿಜಯಲಕ್ಷ್ಮಿ ಸುರೇಶ್ ಜೋಶಿ ರವರು ಮಾತನಾಡಿ ಇಸ್ರೋ ಸಂಸ್ಥೆ ಭಾರತದ ಬಾಹ್ಯಕಾಶ ಅಭಿವೃದ್ಧಿಗಾಗಿ ಅವಿರತ ಸಾಧನೆ ಮಾಡುತ್ತಿದೆ. ಶ್ರಮಿಸುತ್ತಿರುವ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಇಡೀ ವಿಶ್ವದಲ್ಲಿ ಭಾರತ ಬಾಹ್ಯಕಾಶ ಕ್ಷೇತ್ರದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಮೂಲಕ ಜಗತ್ತಿನ ತಂತ್ರಜ್ಞಾನಕ್ಕೆ ಅಪಾರ ಕೊಡುಗೆ ನೀಡಿದೆ. ಬಾಹ್ಯಕಾಶ ತಂತ್ರಜ್ಞಾನದಿಂದ ಇಂದು ಮಾನವನ ಸಮಗ್ರ ಕಲ್ಯಾಣ, ಆರೋಗ್ಯ, ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪಥ ದತ್ತ ಸಾಗಿ ವಿಶ್ವದಲ್ಲಿ ಅಗ್ರಗಣ್ಯ ದೇಶವಾಗಲು ಬಾಹ್ಯಾಕಾಶ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ರಾಷ್ಟ್ರೀಯ ಬಾಹ್ಯಾಕಾಶ ದಿನಕ್ಕೆ ಶುಭ ಕೋರಿದ ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರು ಹಾಗೂ ಸಾಫ್ಟ್ವೇರ್ ಇಂಜಿನಿಯರ್ ಶರಣ್ಯ ಎಸ್ ಋಗ್ವೇದಿ ಮಾತನಾಡಿ ಬಾಹ್ಯಾಕಾಶದ ಸಮಗ್ರ ಅಭಿವೃದ್ಧಿಯಿಂದ ಇಂದು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ಹಾಗೂ ಸಾಧನೆಯನ್ನು ಮಾಡಲು ಎಲ್ಲಾ ಸಾಧ್ಯತೆಗಳು ಮೂಡಿದೆ. ಭಾರತದ ಜ್ಞಾನಿಗಳ ದೇಶ. ಭಾರತದ ಯುವಕರು ತಂತ್ರಜ್ಞಾನದ ವಿಶೇಷ ಪರಿಣಿತರು. ಬಾಹ್ಯಕಾಶದ ಹಾಗೂ ಇತರ ತಂತ್ರಜ್ಞಾನದ ಮೂಲಕ ಸಾಧನೆಯನ್ನು ಮಾಡುವ ಮೂಲಕ ಇಡೀ ವಿಶ್ವಕ್ಕೆ ಗಮನಸೆಳೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಅಪಾರ ಬದಲಾವಣೆಯನ್ನು ಕಾಣಬಹುದು, ಮುಂದಿನ ದಿನಗಳು ಇಡೀ ಜಗತ್ತು ಬೆರಗಾಗುವ ರೀತಿಯಲ್ಲಿ ಬದಲಾವಣೆಯನ್ನು ಭಾರತದ ಬುದ್ಧಿವಂತ ಹಾಗೂ ಅಧ್ಯಯನ ಶೀಲ ಯುವಕರು ಮತ್ತು ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದಲ್ಲಿ ಶ್ರೇಷ್ಠ ಭಾರತ, ವಿಕಸಿತ ಭಾರತವನ್ನು ನಿರ್ಮಿಸುವುದರಲ್ಲಿ ಸಂಶಯವೇ ಇಲ್ಲ ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಆಗಸ್ಟ್ 23 ಭಾರತಕ್ಕೆ ಹೆಮ್ಮೆಯ ದಿನ, ಚಂದ್ರಯಾನ 3 ಉಡಾವಣೆ ಮಾಡುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಯಿತು. ಭಾರತದ ಇಸ್ರೋ ಸಂಸ್ಥೆ 1969ರಲ್ಲಿ ಆರಂಭವಾಗಿ, ಶ್ರೇಷ್ಠ ವಿಜ್ಞಾನಿ ಡಾ. ವಿಕ್ರಂ ಸಾರಾಭಾಯಿ ನೇತೃತ್ವದಲ್ಲಿಇಸ್ರೋ ಸ್ಥಾಪಿತವಾಗಿ ಇಂದಿಗೂ ಶ್ರೇಷ್ಠ ಸಾಧನೆಗಳನ್ನು ಮಾಡುವ ಮೂಲಕ ಆರ್ಯಭಟ, ರೋಹಿಣಿ,ಭಾಸ್ಕರ್, ಚಂದ್ರಯಾನ, ಆದಿತ್ಯ,ಗಗನ್ಯಾನ್, ಮಂಗಳಯಾನ ಚಂದ್ರಯಾನದ ವಿಶೇಷವಾದಂತಹ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ತಮ್ಮ ಸಂಶೋಧನೆಗಳ ಮೂಲಕ ಜಗತ್ತಿಗೆ ಮಾದರಿಯಾದ ವಿಜ್ಞಾನಿಗಳ ಕಾರ್ಯವನ್ನು ಅದಕ್ಕಾಗಿ ವಿಶೇಷ ಯೋಜನೆಗಳನ್ನು ರೂಪಿಸುತ್ತಿರುವ ಭಾರತ ಸರ್ಕಾರಕ್ಕೆ ಅನಂತ ಧನ್ಯವಾದಗಳನ್ನು ಭಾರತೀಯರೆಲ್ಲರೂ ಅರ್ಪಿಸಬೇಕು. ಅಭಿವೃದ್ಧಿ ಪಥ ದತ್ತ ಸಾಗುತ್ತಿರುವ ಭಾರತಕ್ಕೆ 2047ರ ಭಾರತ ಇಡೀ ಜಗತ್ತಿಗೆ ಸಮಗ್ರ ಅಭಿವೃದ್ಧಿಯ ಭಾರತವಾಗಿ ರೂಪಿತವಾಗುವ ಕಾರ್ಯವನ್ನು ಸರ್ವರು ಕಾಯ ವಾಚ ಮನಸ ಮಾಡೋಣ. ಯುವಶಕ್ತಿ, ವಿದ್ಯಾರ್ಥಿ ಶಕ್ತಿಗೆ ಸಾಧನೆ ಮಾಡಲು ಪ್ರೇರಣೆ, ಸ್ಫೂರ್ತಿ ಸಹಕಾರ ಅವಕಾಶ ಕೊಡಬೇಕು. ದೇಶಭಕ್ತಿಯನ್ನು ಮೂಡಿಸಿ ದೇಶಕ್ಕಾಗಿ ಅರ್ಪಿಸಿಕೊಳ್ಳುವ ಭಾವನೆಯನ್ನು ಹೃದಯ ಶ್ರೀಮಂತಿಕೆಯನ್ನು, ಶ್ರೇಷ್ಠತೆಯನ್ನು ಬದ್ಧತೆ, ಕ್ರಿಯಾ ಗುಣವನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಬಾಹ್ಯಾಕಾಶದ ದಿನದ ಅಂಗವಾಗಿ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು, ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಸುರೇಶ್ ಜೋಷಿ, ಕುಸುಮ ಋಗ್ವೇದಿ, ಶ್ರಾವ್ಯ ಋಗ್ವೇದಿ, ಮಕ್ಕಳಾದ ಶ್ರೀಪ್ರಭಾ, ಖುಷಿ, ಸುದೀಕ್ಷಾ, ಕೃಷ್ಣ ಇದ್ದರು.




