ಚಾಮರಾಜನಗರ: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂವಾರಿ ಹಾಗೂ ವೀರ ತ್ಯಾಗಿ ಮಂಗಲ್ ಪಾಂಡೆಯವರ ಧೈರ್ಯ,ಸಾಹಸ, ರಾಷ್ಟ್ರೀಯತೆ, ಸ್ವಾಭಿಮಾನ,ದೇಶಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿಟ್ಟ ಆದರ್ಶವನ್ನು ಪ್ರತಿಯೊಬ್ಬ ಭಾರತೀಯನು ನೆನೆಸಿಕೊಳ್ಳಬೇಕು ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ನಗರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ಹಮ್ಮಿಕೊಂಡಿದ್ದ ಮಂಗಳ ಪಾಂಡೆ ಜನ್ಮ ದಿನದಲ್ಲಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಹಾಗೂ ರಾಷ್ಟ್ರೀಯತೆಯ ಸ್ಪೂರ್ತಿಯ ಹಲವಾರು ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಭಾರತೀಯ ಸ್ವಾತಂತ್ರ್ಯದ ಹೋರಾಟ ಅತ್ಯಂತ ಮಹತ್ವವಾದದ್ದು. ಭಾರತೀಯ ಸ್ವಾತಂತ್ರ ಹೋರಾಟವು 1857ರ ಪ್ರಥಮ ಭಾರತದ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಆರಂಭವಾಯಿತು.ಈಸ್ಟ್ ಇಂಡಿಯಾ ಕಂಪನಿಯವರು ಭಾರತೀಯ ಸೈನಿಕರಿಗೆ ಬಲವಂತವಾಗಿ ಧರ್ಮಕ್ಕೆ ವಿರುದ್ಧವಾದ ಏನ್ ಫೀಲ್ಡ್ ಬಂದೂಕವನ್ನು ಸೈನಿಕರಿಗೆ ಬಳಸಲು ಆದೇಶಿಸಿದಾಗ ಅದನ್ನು ವಿರೋಧಿಸಿದ ಈಸ್ಟ್ ಇಂಡಿಯಾ ಕಂಪನಿಯ 34ನೇ ಪದಾತಿ ದಳದ ವೀರಯೋಧ ಮಂಗಳ ಪಾಂಡೆ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಹಾಕುವ ಮೂಲಕ ಪ್ರತಿಭಟಿಸಿದರು. ಹಸು ಹಂದಿಯ ಕೊಬ್ಬನ್ನು ಸವರಲಾಗಿದೆ ಎಂಬ ವಿಚಾರದಲ್ಲಿ ತೀವ್ರ ಹೋರಾಟ ನಡೆದು ಮಂಗಲ ಪಾಂಡೆಯವರನ್ನು ಬಂಧಿಸಿ 1957ರಲ್ಲಿ ಮರಣ ದಂಡನೆಗೆ ಒಳಪಡಿಸಲಾಯಿತು . ಮಂಗಲ್ ಪಾಂಡೆ ಉತ್ತರ ಪ್ರದೇಶದ ನಾಗವ ಗ್ರಾಮದಲ್ಲಿ ಜನಿಸಿದವರು. ತಮ್ಮ 22ನೇ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಿದ ಮಂಗಲ ಪಾಂಡೆ ಏನ್ ಫೀಲ್ಡ್ ವಿರುದ್ಧ ಬ್ರಿಟಿಷರ ಬಂಧನಕ್ಕೆ ಒಳಗಾಗಿ ವೀರಮರಣವನ್ನು ಹೊಂದಿದ ಮಂಗಳ ಪಾಂಡೆ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಕಿದ ಹುತಾತ್ಮ. ಮಂಗಳ ಪಾಂಡೆ ಅಂತಹ ಲಕ್ಷಾಂತರ ದೇಶಪ್ರೇಮಿಗಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ತ್ಯಾಗ ಬಲಿದಾನವನ್ನು ಮಾಡಿದ್ದಾರೆ.ಅವರೆಲ್ಲರ ಆತ್ಮಕ್ಕೆ ಶಾಂತಿ ಕೋರುವ ಮೂಲಕ ಪ್ರತಿಯೊಬ್ಬರಲ್ಲೂ ರಾಷ್ಟ್ರಕ್ಕಾಗಿ ಅರ್ಪಿಸಿಕೊಳ್ಳುವ ಭಾವನೆ ಮೂಡಲಿ. ದೇಶಕ್ಕೆ ಸೇವೆಯನ್ನು ಸಲ್ಲಿಸುವ ಗುಣವನ್ನು ಬೆಳೆಸಿಕೊಳ್ಳೋಣ ಎಂದು ತಿಳಿಸಿದರು.
ದೇಶಭಕ್ತಿಯ ಪುಸ್ತಕಗಳನ್ನು ಪ್ರದರ್ಶಿಸುವ ಕಾರ್ಯವನ್ನು ಉದ್ಘಾಟಿಸಿದ ಓಂ ಶಾಂತಿ ನ್ಯೂ ಸಿನ ಬಿಕೆ ಆರಾಧ್ಯ ಮಾತನಾಡಿ ಸಾವಿರಾರು ದೇಶಭಕ್ತರ ಕಾರ್ಯಕ್ರಮಗಳನ್ನು ಜೈ ಹಿಂದ್ ಕಟ್ಟೆಯಲ್ಲಿ ರೂಪಿಸುವ ಮೂಲಕ ರಾಷ್ಟ್ರೀಯತೆ,ನಾಡು, ನುಡಿ, ಎಲ್ಲಾ ಭಾಷೆ,ಸಂಸ್ಕೃತಿ, ಪರಂಪರೆಯ ಹಾಗೂ ರಾಷ್ಟ್ರವೀರರ ಚಿಂತನಾ ಕಾರ್ಯಕ್ರಮಗಳನ್ನು ರೂಪಿಸಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿರುವ ಋಗ್ವೇದಿಯವರ ರಾಷ್ಟ್ರೀಯ ಚಿಂತನೆ, ಸಾಂಸ್ಕೃತಿಕ ಜಾಗೃತಿಯ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಶ್ರೀನಿವಾಸ ಪ್ರಸಾದ್, ಸಚ್ಚಿದಾನಂದ, ನಂಜೆ ದೇವನಪುರ ಚಿಕ್ಕಸಿದ್ದಪ್ಪ ಇದ್ದರು.
