
ಕೊಳ್ಳೇಗಾಲ: ತಾಲೂಕಿನ ತಿಮ್ಮರಾಜಿಪುರ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2025- 26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 49 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ಪಡೆದಿರುತ್ತಾರೆ. ಕುಮಾರಿ ದೀಪಿಕಾ ಎನ್ ರವರು 625ಕ್ಕೆ 619 ಅಂಕಗಳನ್ನು, ಕುಮಾರಿ ಯೋಗಿತಾ ರವರು 608 ಮತ್ತು ಕುಮಾರಿ ಸಹನಾ ರವರು 603 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. 25 ವಿದ್ಯಾರ್ಥಿನಿಯರು ಅತ್ಯುತ್ತಮ ದರ್ಜೆ, 21 ವಿದ್ಯಾರ್ಥಿನಿಯರು ಪ್ರಥಮ ದರ್ಜೆ ಮತ್ತು 2 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಿಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ,ತಾಲೂಕು ಅಧಿಕಾರಿಗಳು, ಪ್ರಾಂಶುಪಾಲರು , ಭೋದಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.




