ರಾಜ್ಯ ಸರ್ಕಾರವು ಮೇ.೧೪ ರಂದು ಹೊರಡಿಸಿದ್ದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ, ಬಡವರಿಗೆ ಕಡಿಮೆ ದರದಲ್ಲಿ ಔಷಧಿ ಒದಗಿಸುವ ವ್ಯವಸ್ಥೆಯಲ್ಲಿ ಸರ್ಕಾರದ ಒಂದು ವಿಭಾಗವು ಹಸ್ತಕ್ಷೇಪ ಮಾಡಲು ನಾವು ಅನುಮತಿ ನೀಡುವುದಿಲ್ಲ ಎಂದು ಹೇಳಿದೆ. ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ಜನೌಷಧಿ ಕೇಂದ್ರಗಳು, ಸಾರ್ವಜನಿಕರ ಆರೋಗ್ಯ ಹಕ್ಕಿಗೆ ಪೂರಕವಾಗಿದ್ದು, ಅವುಗಳನ್ನು ಮುಚ್ಚುವುದು ಬಡವರು, ಹಿರಿಯ ನಾಗರಿಕರು ಮತ್ತು ರೋಗಿಗಳಿಗೆ ನೇರ ಹಾನಿಯಾಗುತ್ತದೆ ಎಂದು ಸೂಚಿಸಿದೆ. ಸರ್ಕಾರಿ ವಕೀಲರು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧ ಪೂರೈಸಲು ನಿರ್ಧರಿಸಿದ್ದು, ಜನೌಷಧಿ ಕೇಂದ್ರಗಳು ಆಸ್ಪತ್ರೆ ಆವರಣದ ಹೊರತಾಗಿ ಬೇರೆಡೆ ಕಾರ್ಯ ನಿರ್ವಹಿಸಿದರೆ ಯಾವುದೇ ತೊಂದರೆ ಇಲ್ಲ ಎಂದರು. ಸಮಾಲೋಚನೆ ಇಲ್ಲದೆ ತೆಗೆದುಕೊಳ್ಳಲಾದ ಈ ತುರ್ತಿನ ಆದೇಶ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಿವರಿಸಿದರು.
