
ಶೃಂಗೇರಿ: ಖಾಂಡ್ಯ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಲಿ, ರೈತರು ಹಾಗೂ ಜನಸಾಮಾನ್ಯರ ಬದುಕು ಹಸನಾಗಲಿ ಎಂಬ ಸಂಕಲ್ಪದೊಂದಿಗೆ ಖಾಂಡ್ಯ ಹೋಬಳಿ ಸಮಸ್ತರ ಪರವಾಗಿ ಕಿಗ್ಗದ ಶ್ರೀ ಋಷ್ಯಶೃಂಗ ದೇವರಿಗೆ ರುದ್ರಾಭಿಷೇಕ ಪೂರ್ವಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರುದ್ರಾಭಿಷೇಕದ ಬಳಿಕ ಪವಿತ್ರ ತೀರ್ಥವನ್ನು ಖಾಂಡ್ಯ ಮಾರ್ಕಂಡೇಶ್ವರ ದೇವರ ಸನ್ನಿಧಿಯಲ್ಲಿ ಭದ್ರಾ ನದಿಗೆ ವಿಸರ್ಜಿಸಲಾಯಿತು. ಈ ವಿಶೇಷ ಪೂಜಾ ಕಾರ್ಯದಲ್ಲಿ ಹೋಬಳಿ ಹಿರಿಯರಾದ ಗೋಪಾಲ ಗೌಡ, ರತ್ನಾಕರ ಗೌಡ, ಮಂಜುನಾಥ್ ಐನೂರು, ಶಿವಶಂಕರ್, ಅಣ್ಣಪ್ಪ ಗೌಡ, ನೀಲಪ್ಪ ಗೌಡ, ಚಂದ್ರೇಗೌಡ, ವಾಸಪ್ಪ ಗೌಡ, ಜಗದೀಶ್ ಗೌಡ, ಸುರೇಶ್ ಗೌಡ, ಗುರುಮೂರ್ತಿ, ಪ್ರವೀಣ್, ರಜಿತ್, ಸಂಪತ್, ಜಯಶೀಲ, ಪೂರ್ಣೇಶ್ ಸೇರಿದಂತೆ ಹೋಬಳಿಯ ಹಲವು ಪ್ರತಿನಿಧಿಗಳು ಹಾಗೂ ಪ್ರಮುಖರು ಭಾಗವಹಿಸಿದ್ದರು.






