
ಕಾರ್ಕಳ: ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಶ್ರೀಮನ್ಮಹಾರಥೋತ್ಸವ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಭಕ್ತಿ ವೈಭವದಲ್ಲಿ ನೆರವೇರಿದ್ದು, ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿಗಳು ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಲ್ಪಿ ರಾಮಚಂದ್ರ ಆಚಾರ್ಯ ವಹಿಸಿದ್ದರೆ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಉದಯ್ ಕುಮಾರ್ ಶೆಟ್ಟಿ ಮುನಿಯಾಲು (ಉದಯ್ ಕೃಷ್ಣ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು) ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಿ. ವಸಂತ ಆಚಾರ್ಯ ನಿವೃತ ಪ್ರಾಂಶುಪಾಲರು, ಸುರೇಶ ಆಚಾರ್ಯ ಹಿರ್ಗಾನ ಚಿನ್ನದ ಕೆಲಸಗಾರರು, ಶಿಲ್ಪಿ ಕೃಷ್ಣ ಆಚಾರ್ಯ ಸರಸ್ವತಿ ಶಿಲ್ಪ ಕಲಾ ಕೇಂದ್ರ ನಕ್ರೆ ಕಲಾ ಶಿಲ್ಪಿಗಳು, ಆನಂದ ಆಚಾರ್ಯ ಕಮ್ಮಾರರು, ವಿಶ್ವನಾಥ ಆಚಾರ್ಯ ಕಾಷ್ಠ ಶಿಲ್ಪಿಗಳು ಹಾಗೂ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಕುಮಾರಿ ಲಾವಣ್ಯ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಪ್ರಭಾಕರ ಆಚಾರ್ಯ ಮೂಡು ಹಿರ್ಗಾನ, ಹರೀಶ್ ಆಚಾರ್ಯ ನಲ್ಲೂರು ಮತ್ತು ಅಚ್ಚುತ ಆಚಾರ್ಯ ಕೂಡುವಳಿ ಮೊಕ್ತೇಸರರು ಗೌರವ ಸಮರ್ಪಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸುರೇಶ್ ಆಚಾರ್ಯ ಪ್ರಾಸ್ತಾವಿಕ ಭಾಷಣ ಮಾಡಿದರು.
ವರದಿ: ಅರುಣ್ ಭಟ್ ಕಾರ್ಕಳ






