
ಚಿಕ್ಕಮಗಳೂರು : ಖಾತೆಗೆ ಹಣ ಜಮೆಯಾದ ಫ್ರ್ಯಾಕ್ಷನ್ ಆಫ್ ಸೆಕೆಂಡ್ನಲ್ಲೇ ಸೈಬರ್ ಕಳ್ಳರು ಕನ್ನ ಹಾಕಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿನ್ನ ಅಡವಿಟ್ಟು ಪಡೆದ 4.14 ಲಕ್ಷ ರೂಪಾಯಿ ಗೋಲ್ಡ್ ಲೋನ್ ಹಣ ಬ್ಯಾಂಕ್ ಖಾತೆಗೆ ಜಮೆಯಾದ ಕೆಲವೇ ಕ್ಷಣಗಳಲ್ಲಿ ವಕೀಲರೊಬ್ಬರ ಖಾತೆಯಿಂದ 99,584 ರೂಪಾಯಿಯನ್ನು ಅಮೆಜಾನ್ ಪೇ ಮೂಲಕ ಸೈಬರ್ ಕ್ರಿಮಿಗಳು ಎಗರಿಸಿದ್ದಾರೆ. ಬ್ಯಾಂಕ್ನಿಂದ ಹೊರಗೂ ಬಂದಿರದ ವೇಳೆ ಈ ಘಟನೆ ನಡೆದಿದ್ದು, ಯಾವುದೇ ಓಟಿಪಿ ಸಂದೇಶ ಅಥವಾ ಎಪಿಕೆ ಲಿಂಕ್ ಬಂದಿರಲಿಲ್ಲ ಎಂದು ವಕೀಲರು ತಿಳಿಸಿದ್ದಾರೆ. ಖಾತೆಗೆ ಹಣ ಜಮೆಯಾದ ತಕ್ಷಣವೇ ಸೈಬರ್ ಕಳ್ಳರು ಕನ್ನ ಹಾಕಿರುವುದರಿಂದ ವಕೀಲರು ಬೆಚ್ಚಿಬಿದ್ದಿದ್ದಾರೆ. ಸದ್ಯ ಹಣ ಕಳೆದುಕೊಂಡ ವಕೀಲರು ಸೈಬರ್ ಚಿಕ್ಕಮಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.





