
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಹಾಂದಿ ಸಮೀಪ ಕಡೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರ ಪಕ್ಕದಲ್ಲಿರುವ ಮನೆಯಲ್ಲಿ ‘ಸಾಂಬರ್ ಮಾಡಿಲ್ಲ’ ಎಂಬ ವಿಚಾರಕ್ಕೆ ಕುಟುಂಬ ಕಲಹ ತಾರಕಕ್ಕೇರಿದ ಘಟನೆ ನಡೆದಿದ್ದು, ಚಿತ್ರದುರ್ಗ ಮೂಲದ ಕೂಲಿ ಕಾರ್ಮಿಕ ನಾಗರಾಜ್ ಮದ್ಯಪಾನ ಮಾಡಿ ಮನೆಗೆ ಬಂದು ತನ್ನ ಅಕ್ಕ ಅಂಜಲಿ ಹಾಗೂ ಅಕ್ಕನ ಮಗಳು ಮೌಲ್ಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯಲ್ಲಿ ಆರಂಭವಾದ ಜಗಳ ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಮುಂದುವರಿದು, ನಾಗರಾಜ್ ದೊಣ್ಣೆ ಹಿಡಿದು ಇಬ್ಬರಿಗೂ ಬೆದರಿಕೆ ಹಾಕಿದ ಪರಿಣಾಮ ಸುಮಾರು ಅರ್ಧ ಗಂಟೆಗಳ ಕಾಲ ಹೆದ್ದಾರಿಯಲ್ಲಿ ಹೈಡ್ರಾಮ ನಡೆದಿದೆ. ವಾಹನ ಸವಾರರು ಹಾಗೂ ಸ್ಥಳೀಯರು ಬೆಚ್ಚಿಬಿದ್ದಿದ್ದು, ಜಗಳ ಬಿಡಿಸಲು ಮುಂದಾದ ಸ್ಥಳೀಯರ ಮೇಲೂ ಹಲ್ಲೆಗೆ ಮುಂದಾದ ನಾಗರಾಜ್ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಆಲ್ದೂರು ಪೊಲೀಸ್ ಠಾಣೆಯ ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದು, ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



