
ಕೊಟ್ಟಿಗೆಹಾರ: ಬಣಕಲ್ ಪೊಲೀಸ್ ಠಾಣೆಗೆ ನೂತನ ಸಬ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ ದಿಲೀಪ್ ಕುಮಾರ್ ಅವರಿಗೆ ಬಣಕಲ್ ಕ್ರೈಸ್ತರ ಅಭಿವೃದ್ಧಿ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬಾಳೂರು ಪೊಲೀಸ್ ಠಾಣೆಯಿಂದ ಬಣಕಲ್ ಠಾಣೆಗೆ ವರ್ಗಾವಣೆಯಾದ ದಿಲೀಪ್ ಕುಮಾರ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ, ಸಂಘದ ಅಧ್ಯಕ್ಷ ಪೆಡ್ಡಿ ಲೋಬೊ, ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್, ಸದಸ್ಯರಾದ ವಿಕ್ಟರ್ ರೊಡ್ರಿಗಸ್, ನವೀನ್ ಕುವೆಲ್ಲೊ ಸೇರಿದಂತೆ ಹಲವರು ಉಪಸ್ಥಿತರಿದ್ದರು.




