
ಶೃಂಗೇರಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮುಂದುವರಿದ ತೀವ್ರ ಯುದ್ಧದ ಪರಿಣಾಮ ಡ್ರೈಫ್ರೂಟ್ಸ್ ಆಮದಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ನಡುವೆಯೇ ಶೃಂಗೇರಿಯಲ್ಲಿ ವಿಚಿತ್ರ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಶಾರದಾಂಬೆ ದೇವಸ್ಥಾನದ ಪಕ್ಕದ ಪಾರ್ಕಿಂಗ್ ಲಾಟ್ ಪ್ರದೇಶದಲ್ಲಿರುವ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಕಳ್ಳನು ಸುಮಾರು 10 ಕೆಜಿಗೂ ಅಧಿಕ ಪಿಸ್ತಾ, ಬಾದಾಮಿ ಮತ್ತು ಗೋಡಂಬಿ ಸೇರಿದಂತೆ ಸುಮಾರು ₹80 ಸಾವಿರ ಮೌಲ್ಯದ ನಗದು ಹಣ ಕದ್ದೊಯ್ದಿದ್ದಾನೆ. ದೇವರಿಗೆ ಇಡಲಾಗಿದ್ದ ಹಣ ಹಾಗೂ ಫುಟ್ಪಾತ್ ಅಂಗಡಿದಾರರು ರಾತ್ರಿ ಅಂಗಡಿಯಲ್ಲಿ ಇಟ್ಟು ಬೆಳಿಗ್ಗೆ ಪಡೆಯುವ ಹಣವನ್ನೂ ಕಳ್ಳತನ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ಥಳದ ಪರಿಸ್ಥಿತಿ ಮತ್ತು ಕ್ರಮವನ್ನು ಗಮನಿಸಿದರೆ ಅಂಗಡಿಯ ಮಾಹಿತಿ ಹೊಂದಿದ್ದ ಪರಿಚಿತ ವ್ಯಕ್ತಿಯೇ ಈ ಕೃತ್ಯ ನಡೆಸಿರುವ ಸಾಧ್ಯತೆ ವ್ಯಕ್ತವಾಗಿದೆ. ಈ ಘಟನೆ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.




