
ಚಿಕ್ಕಮಗಳೂರು: ನಗರದಲ್ಲಿ ದಾವುದ್ ಇಬ್ರಾಹಿಂನನ್ನು ಹೀರೋ ರೀತಿಯಲ್ಲಿ ಚಿತ್ರಿಸಿರುವ ತಮಿಳುನಾಡು ಮೂಲದ ಖಾಸಗಿ ಬಸ್ಸನ್ನು ಹಿಂದೂ ಸಂಘಟನೆಗಳು ಲಾಕ್ ಮಾಡಿದ ಘಟನೆ ನಡೆದಿದೆ. ನಗರದ ಎನ್.ಎಂ.ಸಿ ಸರ್ಕಲ್ನಲ್ಲಿ ಬಸ್ಸನ್ನು ತಡೆದ ಕಾರ್ಯಕರ್ತರು, ಬಸ್ಸಿನ ಮೇಲೆ ‘ಲೈವ್ ಬೈ ಎ ಗನ್, ಡೈ ಬೈ ಎ ಗನ್’, ‘ಕ್ರೈಮ್ ಲಾರ್ಡ್ ಕ್ರಾನಿಕಲ್ಸ್’, ‘ದಾವುದ್ ದಿ ರಿಯಲ್ ಡಾನ್’ ಸೇರಿದಂತೆ ಹಲವು ವಿವಾದಾತ್ಮಕ ಸ್ಟಿಕ್ಕರ್ಗಳನ್ನು ಅಳವಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ಸಿನ ಹಿಂದೆ ‘ಡಿ ಗ್ಯಾಂಗ್ ಆಫ್ ಮುಂಬೈ’ ಎಂದು ಬರೆದು, ಅಂಡರ್ವರ್ಡ್ ಡಾನ್ ದಾವುದ್ರನ್ನು ಹೀರೋನಂತೆ ಚಿತ್ರಿಸಲಾಗಿದೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ಬಸವನಹಳ್ಳಿ ಠಾಣೆ ವ್ಯಾಪ್ತಿಗೆ ಕರೆದೊಯ್ದಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.




