ಚಿಕ್ಕಮಗಳೂರು: ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ ಮಾರ್ಚ್ 29ರಿಂದ ಏಪ್ರಿಲ್ 2, 2026ರವರೆಗೆ ಭಕ್ತಿಭಾವದಿಂದ ‘ಬ್ರಹ್ಮೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀ ಮಠದ ಆಶ್ರಯದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಪ್ರತಿದಿನ ವಿವಿಧ ಹೋಮ–ಹವನಗಳು, ವಿಶೇಷ ಅಭಿಷೇಕಗಳು, ಅಲಂಕಾರ ಪೂಜೆಗಳು, ಭಜನೆ, ಪಾರಾಯಣ ಹಾಗೂ ರಥೋತ್ಸವ ನಡೆಯಲಿವೆ. ಏಪ್ರಿಲ್ 2ರಂದು ಪೂರ್ಣಾಹುತಿ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.
ಸೇವಾ ವಿವರಗಳಲ್ಲಿ ಬ್ರಹ್ಮೋತ್ಸವ ಅರ್ಚನೆಗೆ ₹100, ವಿಶೇಷ ಅಭಿಷೇಕಕ್ಕೆ ₹500, ಬ್ರಹ್ಮೋತ್ಸವ ಪೂಜಾ ಸೇವೆಗೆ ₹1,000, ಹೋಮ ಸಂಕಲ್ಪ ಸೇವೆಗೆ ₹1,000, ಬ್ರಹ್ಮೋತ್ಸವ ಸಂಕಲ್ಪ ಕಾಣಿಕೆಗೆ ₹2,000, ಪುಷ್ಪ ಸೇವೆಗೆ ₹3,000, ಒಂದು ದಿನದ ಸರ್ವ ಸೇವೆಗೆ ₹10,000 ಹಾಗೂ ಬ್ರಹ್ಮೋತ್ಸವ ಅನ್ನದಾನ ಸೇವೆಗೆ ₹25,000 ನಿಗದಿಪಡಿಸಲಾಗಿದೆ. ಸೇವಾ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.
ದೂರವಾಣಿ ಸಂಖ್ಯೆ: 7975790541, 9019977466.
