
ಕೊಟ್ಟಿಗೆಹಾರ: ಸಮೀಪದ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದ ನಿತಿನ್ ಕುವೆಲ್ಲೊ ಅವರು ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ರಾಜ್ಯದಲ್ಲಿ ಆಯ್ಕೆಯಾದ 83 ಸಿವಿಲ್ ನ್ಯಾಯಾಧೀಶರ ಪೈಕಿ ಒಬ್ಬರಾಗಿ ನೇಮಕಗೊಂಡಿದ್ದಾರೆ. ಸಂತ ಮಾರ್ಥಾಸ್ ಶಾಲೆ, ಮೂಡಿಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಅವರು 2021ರಿಂದ ಮೂಡಿಗೆರೆಯ ಹಿರಿಯ ವಕೀಲ ಡಿ.ಎಸ್. ಸುಧೀರ್ ಅವರೊಂದಿಗೆ ಸಹಾಯಕ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು, ಲಿಯೋ ಕುವೆಲ್ಲೊ ಮತ್ತು ಅನಿತ ಕುವೆಲ್ಲೊ ದಂಪತಿಯ ಪುತ್ರನಾದ ನಿತಿನ್ ಅವರ ಸಾಧನೆಯನ್ನು ಮೆಚ್ಚಿ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ನಿರ್ದೇಶಕ ಹರ್ಷ ಮೆಲ್ವಿನ್ ಲಸ್ರಾದೊ ಅವರ ಮನೆಗೆ ಭೇಟಿ ನೀಡಿ ನಿಗಮದ ವತಿಯಿಂದ ಸನ್ಮಾನಿಸಿದ್ದು, ಈ ವೇಳೆ ಬಣಕಲ್ ಕ್ರೈಸ್ತ ಅಭಿವೃದ್ಧಿ ಸಂಘದ ಅಧ್ಯಕ್ಷ ಪೆಡ್ಡಿ ಲೋಬೊ ಹಾಗೂ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಉಪಸ್ಥಿತರಿದ್ದರು.




