ಕೊತ್ತಂಬರಿಯನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸಲಾಗುತ್ತದೆಯಾದರೂ, ಆಯುರ್ವೇದದಲ್ಲಿ ಇದಕ್ಕೆ ಔಷಧೀಯ ಮಹತ್ವವಿದೆ. ಕೊತ್ತಂಬರಿ ಬೀಜಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಮಧುಮೇಹ ಹೊಂದಿರುವವರಿಗೆ ತಜ್ಞರು ಕೊತ್ತಂಬರಿ ನೀರನ್ನು ಮಿತವಾಗಿ ಸೇವಿಸಲು ಸಲಹೆ ನೀಡುತ್ತಾರೆ. ಎರಡು ಚಮಚ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಕುದಿಸಿ, ಸ್ವಲ್ಪ ಉಪ್ಪು, ದಾಲ್ಚಿನ್ನಿ ಹಾಗೂ ಕರಿಮೆಣಸು ಸೇರಿಸಿ ಕಷಾಯ ತಯಾರಿಸಿ ಬೆಳಿಗ್ಗೆ ಸೇವಿಸಬಹುದು. ಅಲ್ಲದೇ, ರಾತ್ರಿ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗಿದೆ.
