ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣ ಘೋಷಣೆ ಎರಡು ವರ್ಷವಾದರೂ ಕಾರ್ಯಸಾಧ್ಯತಾ ವರದಿ ಹಂತದಲ್ಲಿದೆ. ಜಿಲ್ಲೆಯಲ್ಲಿ ಕಾಫಿ ಮತ್ತು ಏಲಕ್ಕಿ, ಮೆಣಸು, ಶುಂಠಿ, ಲವಂಗ, ದಾಲ್ಚಿನ್ನಿ, ಜಾಯಿಕಾಯಿ ಮುಂತಾದ ಸಾಂಬಾರು ಪದಾರ್ಥಗಳು ಬೆಳೆಯುತ್ತಿದ್ದು, ಸ್ಪೈಸ್ ಪಾರ್ಕ್ ನಿರ್ಮಾಣದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ, ಸಂಸ್ಕರಣಾ ಸೌಲಭ್ಯ ಮತ್ತು ಕಡಿಮೆ ವೆಚ್ಚದಲ್ಲಿ ವ್ಯಾಪಾರ-ರಫ್ತು ಸೌಲಭ್ಯ ಲಭ್ಯವಾಗುವ ನಿರೀಕ್ಷೆ ಇದ್ದು, ಮೊದಲನೆಯ ಜಾಗ ಅಸಮರ್ಪಕವೆಂದು ಪರಿಗಣಿಸಿ, ಪರ್ಯಾಯವಾಗಿ ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿಯ ಬೆಟ್ಟದಮನೆ ಗ್ರಾಮದ 9 ಎಕರೆ ಜಾಗವನ್ನು ನೀಡಲಾಗಿದೆ. ವಿಧಾನಸಭೆಯಲ್ಲಿ ಶಾಸಕರು ಈ ವಿಳಂಬದ ಬಗ್ಗೆ ಪ್ರಸ್ತಾಪಿಸಿದ್ದು, ಸಚಿವರು ಪಿಪಿಪಿ (ಖಾಸಗಿ ಸಹ ಭಾಗಿತ್ವ) ಮಾದರಿಯಲ್ಲಿ ಯೋಜನೆ ನಡೆಯುತ್ತಿದೆ, ಸಮಾಲೋಚಕರ ನೇಮಕ ಮಾಡಿ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
