ಶಿವಮೊಗ್ಗ: ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಇಲಾಖೆಗಳು ೧೨೫ ಸ್ಥಳಗಳಲ್ಲಿ ನಡೆಸಿದ ನೀರಿನ ಮಾದರಿಗಳ ಪರಿಶೀಲನೆಯಲ್ಲಿ ನೀರು ಕಲುಷಿತಗೊಂಡಿರುವುದು ಧೃಡಪಟ್ಟಿದ್ದು, ರಾಜ್ಯದ ೧೪ ನದಿಗಳ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ ಎಂಬ ವರದಿ ತಿಳಿದು ಬಂದಿದೆ. ಅದರಲ್ಲಿ ತುಂಗಾ ನದಿಯು ಒಂದು, ಜೀವ ನದಿ ತುಂಗೆಯ ನೀರಿನಲ್ಲಿ ೮ ಎಂಜಿ ಬಿಒಡಿ ಇರುವುದು ಪತ್ತೆಯಾಗಿದ್ದು, ಲೋಕಾಯುಕ್ತ ನ್ಯಾಯಾಲಯವು ದೂರು ದಾಖಲಿಸಿಕೊಂಡಿದ್ದು, ನಗರದ ಕಲುಷಿತ ನೀರು ನದಿಗೆ ಬಿಡುವಂತಿಲ್ಲ ಎಂದು ಸೂಚಿಸಿದೆ. ಪ್ರೊ.ಕೆ.ಯೋಗೇಂದ್ರ ಮುಖ್ಯಸ್ಥ, ಪರಿಸರ ವಿಜ್ಞಾನ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ಪ್ರಕಾರ ನೀರು ಕಲುಷಿತವಾಗಿರುವ ಕಾರಣ ಸ್ಥಳೀಯ ಜೀವ ಪ್ರಭೇದಗಳು ಕಡಿಮೆಯಾಗುತ್ತವೆ ಎಂದು ತಿಳಿಸಿದ್ದಾರೆ.
