ಅಲೋವೆರಾ: ಅಲೋವೆರಾ ಒಂದು ಅದ್ಭುತ ಔಷಧೀಯ ಗಿಡವಾಗಿದ್ದು, ಇದರ ಉಪಯೋಗಗಳು ಸಾವಿರಾರು ವರ್ಷಗಳಿಂದ ಮಾನವ ಜೀವನದ ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಂಡಿವೆ. ಈ ಗಿಡದ ದಪ್ಪ ಎಲೆಗಳೊಳಗೆ ಪಾರದರ್ಶಕ ಜೆಲ್ ಇದ್ದು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಜೆಲ್ ಚರ್ಮದ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುವುದರ ಜೊತೆಗೆ ಸುಟ್ಟ ಗಾಯಗಳು, ಮೊಡವೆ, ಕಿರಿಕಿರಿ ಹಾಗೂ ಸೂರ್ಯನ ತಾಪದಿಂದ ಉಂಟಾಗುವ ಸಮಸ್ಯೆಗಳನ್ನು ಶಮನಗೊಳಿಸಲು ಇದು ಸಹಕಾರಿಯಾಗುತ್ತದೆ. ಅಲೋವೆರಾ ರಸವನ್ನು ಸೇವಿಸುವುದರಿಂದ ಜಠರದ ಸಮಸ್ಯೆ, ಅರ್ಜೀಣ ಹಾಗೂ ಗ್ಯಾಸ್ಟ್ರಿಕ್ ತೊಂದರೆಗಳು ಕಡಿಮೆಯಾಗುವುದಲ್ಲದೆ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ದೇಹವನ್ನು ಡಿಟಾಕ್ಸ್ ಮಾಡಲು ಸಹ ಅಲೋವೆರಾ ಸಹಾಯಕವಾಗಿದೆ. ಕೂದಲಿನ ಬೆಳವಣಿಗೆಗೆ ಸಹ ಇದು ಉಪಯೋಗಿಯಾಗಿದ್ದು, ತುರಿಕೆ ಹಾಗೂ ಕೂದಲು ಉದುರುವ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಈ ಅಲೋವೆರಾ ಹೆಚ್ಚು ಪ್ರಮಾಣದಲ್ಲಿ ಸೇವಿಸುವುದು ಅಜೀರ್ಣ ಅಥವಾ ಹೊಟ್ಟೆನೋವಿಗೆ ಕಾರಣವಾಗಬಹುದು. ಆದ್ದರಿಂದ ಇದನ್ನು ಮಿತವಾಗಿ ಹಾಗೂ ಅಗತ್ಯವಿದ್ದಲ್ಲಿ ವೈದ್ಯರ ಸಲಹೆ ಪಡೆದು ಬಳಸುವುದು ಒಳಿತು. ಈ ರೀತಿ ಅಲೋವೆರಾ ಪ್ರಾಕೃತಿಕವಾಗಿ ದೇಹದ ಒಳಗಿನಿಂದ ಹೊರಗಡೆಯವರೆಗೆ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡುವ ಒಂದು ಅಮೂಲ್ಯ ವರದಾನವಾಗಿದೆ.
