
ಶೃಂಗೇರಿ: 2026-27ನೇ ಸಾಲಿನ ಶೃಂಗೇರಿ ಟೌನ್ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ’ ಸ್ಪರ್ಧೆಗಳಲ್ಲಿ ಜ್ಞಾನಭಾರತಿ ವಿದ್ಯಾ ಕೇಂದ್ರದ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ, ಒಟ್ಟು ಹದಿಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗ (HPS) – ಪ್ರಥಮ ಸ್ಥಾನ:
• ಕನ್ನಡ ಪದ್ಯ ವಾಚನ: ಶ್ರೀದೇವಿ ರಾವ್ ನುಯಿ
• ಸಂಸ್ಕೃತ ಧಾರ್ಮಿಕ ಪಠಣ: ವಿಭಾವರಿ ಎಸ್.
• ಭಕ್ತಿಗೀತೆ: ಭುವಿ ಡಿ.
• ಹಿಂದಿ ಪದ್ಯ ವಾಚನ: ಶ್ರೀರಕ್ಷಾ
• ಪ್ರಬಂಧ ಸ್ಪರ್ಧೆ: ಸಮನ್ವಿಕೃಷ್ಣ ವಿ. ಎಸ್.
• ಜೇಡಿಮಣ್ಣಿನ ಮಾದರಿ: ಅಭಿರಾಮ್ ಆರ್. ಆಚಾರ್
• ಆಶುಭಾಷಣ (Pick and Speak): ಚಂದನ್ ರಾಜ್
• ಅಭಿನಯ ಗೀತೆ: ದಿತ್ವಿ ಡಿ.
• ಮಿಮಿಕ್ರಿ: ನಿಸ್ವಾರ್ಥ ಎನ್.
ಕಿರಿಯ ಪ್ರಾಥಮಿಕ ವಿಭಾಗ (LPS) – ಪ್ರಥಮ ಸ್ಥಾನ:
• ಜೇಡಿಮಣ್ಣಿನ ಮಾದರಿ: ಧನುಷ್ ಪ್ರವೀಣ್ ವೆಂಕಟೇಶ್
• ಆಶುಭಾಷಣ (Pick and Speak): ಸ್ವಸ್ತಿ ಸಾಯಿರಾಮ್
• ಭಕ್ತಿಗೀತೆ: ಆರಾಧ್ಯ ಎನ್. ಪಿ.
• ದೇಶಭಕ್ತಿ ಗೀತೆ: ಪ್ರತೀಕ್ಷಾ ಬಿ. ಎಸ್.
ಪ್ರಥಮ ಸ್ಥಾನ ಪಡೆದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ಹಂತದ ತಾಲ್ಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.





