ಚಿಕ್ಕಮಗಳೂರು: 28 ರಾಜ್ಯಗಳು ಹಾಗೂ 806 ಜಿಲ್ಲೆಗಳನ್ನು ಕಾಲ್ನಡಿಗೆಯಲ್ಲೇ ಸುತ್ತುವ ಸಂಕಲ್ಪದೊಂದಿಗೆ ಆಕಾಶ್ ಶುಕ್ಲಾ ಅವರು ಭಾರತ ಪರ್ಯಟನೆಗೆ ಮುಂದಾಗಿದ್ದಾರೆ. ಒಟ್ಟು 70 ಸಾವಿರ ಕಿಲೋಮೀಟರ್ ದೂರವನ್ನು ಆರು ವರ್ಷಗಳಲ್ಲಿ ಕ್ರಮಿಸುವ ಗುರಿ ಹೊಂದಿರುವ ಆಕಾಶ್, ಈಗಾಗಲೇ ಒಂದು ವರ್ಷಕ್ಕೂ ಹೆಚ್ಚು ಕಾಲ ಪಾದಯಾತ್ರೆ ನಡೆಸಿದ್ದು, ನಾಲ್ಕು ರಾಜ್ಯಗಳನ್ನು ಪೂರ್ಣಗೊಳಿಸಿ ಸುಮಾರು 8 ಸಾವಿರ ಕಿಲೋಮೀಟರ್ ಕ್ರಮಿಸಿದ್ದಾರೆ. ಸದ್ಯ ಕರ್ನಾಟಕಕ್ಕೆ ಆಗಮಿಸಿರುವ ಅವರು ಕೊಟ್ಟಿಗೆಹಾರದಿಂದ ಶೃಂಗೇರಿ ಹಾಗೂ ಕುಂಚಿಕಲ್ ಜಲಪಾತದತ್ತ ಪಯಣ ಮುಂದುವರಿಸಿದ್ದಾರೆ. ಮುಂದಿನ ಹಂತದಲ್ಲಿ ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ಕಡೆಗೆ ತೆರಳಲಿರುವ ಆಕಾಶ್, ಇನ್ನೂ 62 ಸಾವಿರ ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವ ಅಚಲ ಸಂಕಲ್ಪ ಹೊಂದಿದ್ದಾರೆ.
