
ಚಿಕ್ಕಮಗಳೂರು: ಹಿಂದುತ್ವದ ಫೈರ್ ಬ್ರಾಂಡ್ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಮೂಡಿಗೆರೆ ಪಟ್ಟಣದಲ್ಲಿ ಹೂಮಳೆ ಸ್ವಾಗತ ದೊರೆಯಿತು. ಮೂಡಿಗೆರೆಯಲ್ಲಿ ಆಯೋಜಿಸಲಾಗಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಶ್ರೀರಾಮಸೇನೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಲು ಮುತಾಲಿಕ್ ಆಗಮಿಸಿದ್ದು, ಈ ವೇಳೆ ಅವರ ನಡೆಯುವ ದಾರಿಯುದ್ದಕ್ಕೂ ಶ್ರೀರಾಮಸೇನೆ ಕಾರ್ಯಕರ್ತರು ಹೂಗಳನ್ನು ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಇದೇ ವೇಳೆ ಮುತ್ತೈದೆಯರು ಪೂರ್ಣಕುಂಭದೊಂದಿಗೆ ಮುತಾಲಿಕ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುರುವಂದನಾ ಕಾರ್ಯಕ್ರಮದಲ್ಲಿ ಮುತಾಲಿಕ್ ಅವರಿಗೆ ದೊರೆತ ವಿಶೇಷ ಸ್ವಾಗತ ಎಲ್ಲರ ಗಮನ ಸೆಳೆಯಿತು.
ವರದಿ: ಸಂತೋಷ್ ಅತ್ತಿಗೆರೆ




