ಚಾಮರಾಜನಗರ : ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ಜೈ ಹಿಂದ್ ಅಭಿಯಾನದ ಮೂಲಕ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆಯನ್ನು ಜೈ ಹಿಂದ್ ಕಟ್ಟೆಯಲ್ಲಿ ಆಚರಿಸಲಾಯಿತು.
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ತ್ಯಾಗ ಬಲಿದಾನವನ್ನು ಮರಿಸಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ತ್ಯಾಗ ಬಲಿದಾನವನ್ನು ಮಾಡಿರುವ ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಶಾಂತಿ ಕೋರಿ, ಸ್ವಾತಂತ್ರ ಚಳುವಳಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಮಹತ್ವದ ಪಾತ್ರವನ್ನು ವಹಿಸಿತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಅಂತಿಮ ಹೋರಾಟವಾಗಿ ಕರೆಂಗೆ ಯಾ ಮರೇಂಗೆ,ಮಾಡು ಇಲ್ಲವೇ ಮಡಿ ಹೋರಾಟದ ಮೂಲಕ ಬ್ರಿಟಿಷರಿಗೆ ಅಂತಿಮ ಎಚ್ಚರಿಕೆಯನ್ನು ನೀಡಿದ ಹೋರಾಟ ಆಗಸ್ಟ್ 8, 1942. ಮುಂಬೈನ ಆಜಾದ್ ಮೈದಾನದಲ್ಲಿ ಘೋಷಣೆ ಹೊರಡಿಸಿ ದೇಶದ ಮೂಲೆ ಮೂಲೆಗಳಲ್ಲಿ ಸ್ವಾತಂತ್ರ್ಯದ ಸ್ವಾಭಿಮಾನದ ಕಿಚ್ಚನ್ನು ಪ್ರಜ್ವಲಿಸುವಂತೆ ಮಾಡಿದ ಕ್ವಿಟ್ ಇಂಡಿಯಾ ಚಳುವಳಿಯ ದಿನ ಭಾರತೀಯರು ಮರೆಯಲು ಸಾಧ್ಯವೇ ಇಲ್ಲ.ಸ್ವಾತಂತ್ರ್ಯಕ್ಕೆ ಭದ್ರಬುನಾದಿ ಹಾಕಿದ ಹೋರಾಟ ಸ್ವದೇಶಿ ಚಳುವಳಿ ಮತ್ತು ಸ್ವಾತಂತ್ರ್ಯದ ಜ್ಯೋತಿಯನ್ನು ಇಡೀ ದೇಶದಲ್ಲಿ ನೀಡಿದ ಮಹಾ ಚಳುವಳಿ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ತೆಳ್ಳನೂರು ಶಿವರಾಂ ಮಾತನಾಡಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಭಾರತದ ಪ್ರತಿಯೊಬ್ಬ ಜನಸಾಮಾನ್ಯರಿಂದ ಹಿಡಿದು ಸರ್ವರೂ ಪಾಲ್ಗೊಂಡ ಚಳುವಳಿಯಾಗಿದೆ ಹಿರಿಯರು ರೈತರು ಕಾರ್ಮಿಕರು ಮಹಿಳೆಯರು ಯುವಕರು ವಿದ್ಯಾರ್ಥಿಗಳು ಹಳ್ಳಿ ಹಳ್ಳಿಗಳಲ್ಲಿ ಸ್ವಾತಂತ್ರದ ಕಹಳೆ ಊದಿದ ಚಳವಳಿ. ಇಡೀ ದೇಶವನ್ನು ವ್ಯಾಪಿಸಿದ ಕ್ವಿಟ್ ಇಂಡಿಯಾ ಚಳುವಳಿ ಬ್ರಿಟಿಷರನ್ನು ನಡೆದಿಸಿದ ಚಳುವಳಿಯಾಗಿತ್ತು ಎಂದು ತಿಳಿಸಿ ವೀರ ಸ್ವರ್ಗವನ್ನು ಸೇರಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಅರ್ಪಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಸವಣ್ಣ ,ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್, ರಮೇಶ್ ಇದ್ದರು.
