
RRB: ಭಾರತೀಯ ರೈಲ್ವೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮತ್ತೊಂದು ಸುವರ್ಣಾವಕಾಶ ಸಿಗಲಿದ್ದು, ರೈಲ್ವೆ ನೇಮಕಾತಿ ಮಂಡಳಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ 4,098 ಹುದ್ದೆಗಳ ಭರ್ತಿಗಾಗಿ ಕೇಂದ್ರೀಕೃತ ಉದ್ಯೋಗ ಕಿರು ಅಧಿಸೂಚನೆ CGL 04/2026 ಅನ್ನು ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ ಹಾಗೂ ಕೆಮಿಕಲ್ ಮತ್ತು ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಎಂಜಿನಿಯರಿಂಗ್ ಡಿಪ್ಲೊಮಾ, ಬಿ.ಇ./ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿ ಹೊಂದಿರಬೇಕು. ಅರ್ಜಿದಾರರ ವಯೋಮಿತಿ 18 ರಿಂದ 33 ವರ್ಷಗಳಾಗಿದ್ದು, ಸರ್ಕಾರದ ನಿಯಮಾನುಸಾರ ವಯೋಸಡಿಲಿಕೆ ಅನ್ವಯವಾಗಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹35,400 ಆರಂಭಿಕ ಮೂಲ ವೇತನ ಸೇರಿದಂತೆ ಇತರೆ ಭತ್ಯೆಗಳು ದೊರೆಯಲಿವೆ. ಹುದ್ದೆಗಳ ವಲಯವಾರು ಹಂಚಿಕೆ, ಶೈಕ್ಷಣಿಕ ಅರ್ಹತೆಗಳ ಸಂಪೂರ್ಣ ವಿವರ ಹಾಗೂ ಪರೀಕ್ಷಾ ಪಠ್ಯಕ್ರಮದ ಮಾಹಿತಿ ಸಂಪೂರ್ಣ ಅಧಿಸೂಚನೆ ಬಿಡುಗಡೆಯಾದ ಬಳಿಕ ಪ್ರಕಟವಾಗಲಿದೆ.



