
ಬೆಂಗಳೂರು: ಬೆಂಗಳೂರಿನ ೮ ಖಾಸಗಿ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದು, ದೊಡ್ಡ ಕಾರ್ಯಾಚರಣೆಯನ್ನ ನಡೆಸಿದ್ದಾರೆ. ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಸಿರಿಯಾದ ’ಐಸಿಸ್’ ಶಿಬಿರಗಳಿಗೆ ಭಾರತದಿಂದ ಯುವಕರನ್ನು ನೇಮಕಾತಿ ಮಾಡಲು ಆರ್ಥಿಕ ನೆರವು ನೀಡುತ್ತಿದ್ದಾರೆ ಎನ್ನುವ ಆರೋಪ ತಿಳಿದುಬಂದಿದ್ದು, ಈ ಜಾಲವನ್ನು ಇಡಿ ಅಧಿಕಾರಿಗಳು ಬೆನ್ನಟ್ಟಿದ್ದಾರೆ.
ಕಾರ್ಯಾಚರಣೆಗೆ ಇಳಿದ ಇಡಿಯ 8 ಟೀಮ್ ಖಾಸಗಿ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ಮುಂದುವರೆಸಿದೆ. ಅಕ್ರಮವಾಗಿ ಹಣ ವರ್ಗಾವಣೆ ಆರೋಪದ ಮೇಲೆ ದಾಳಿ ನಡೆದಿದ್ದು, ಎನ್ಐಎ ಕೇಸ್ ಆಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ನಿಷೇಧಿತ ಐಸಿಸ್ಗೆ ಯುವಕರನ್ನ ಸೇರಿಸಲು ಹಣಕಾಸು ನೆರವು ಆರೋಪ ಕೇಳಿ ಬಂದಿದ್ದು, ಪಿಎಂಎಲ್ಎ ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



