
ಮೈಸೂರು : ಗಾನ ಚಂದನ ಕಲಾ ಬಳಗ,ಶಾರದಾದೇವಿ ನಗರ ಮೈಸೂರು ಇವರ ವತಿಯಿಂದ ಜಗದ ಗಾಯಕಿ ನಮ್ಮ ಜಾನಕಿ ಎಂಬ ವಿಶೇಷಎಸ್ ಜಾನಕಿ ಅಮ್ಮನವರ ಗೀತೆಗಳ ಭಾವಗುಚ್ಛ ಕಾರ್ಯಕ್ರಮವನ್ನು ಜಾನ್ಸಿ ಲಕ್ಷ್ಮಿಬಾಯಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಇಂದು 27ರ ಶನಿವಾರ ಸಂಜೆ 5:00ಗೆ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ಮೈಸೂರು ನಗರಾಭಿವೃದ್ಧಿ ಮಾಜಿ ಅಧ್ಯಕ್ಷರಾದ ಹೆಚ್ ವಿ ರಾಜೀವ್ ವಹಿಸುವರು. ಅತಿಥಿಗಳಾಗಿ ಮೈಸೂರು ಜಿಲ್ಲಾ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ನಾಗರಾಜ್ ಬೈರಿ, ಸಂಸ್ಕೃತಿ ಚಿಂತಕ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಚಾಮರಾಜನಗರದ ಸುರೇಶ್ ಎನ್ ಋಗ್ವೇದಿ, ಶ್ರೀದೇವಿ ಡೆವಲಪರ್ಸ್ ಮಾಲೀಕರಾದ ಸೋಮಶೇಖರ್, ಗಾಯಕರು ವೈದ್ಯರಾದ ಡಾ.ನಟಶೇಖರ್, ಗೋಪಾಲಗೌಡ ಆಸ್ಪತ್ರೆಯ ಎಂಡಿ ಡಾ ಸುಶ್ರೀತ್ ಗೌಡ ಆಗಮಿಸವರು. ಪ್ರವೇಶ ಉಚಿತವಿದ್ದು, ಸರ್ವರಿಗೂ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಸಂಘಟಕರಾದ ಸುಧೀಂದ್ರ ಮೈಸೂರು ಹಾಗೂ ವಿಶ್ವನಾಥ್ ರವರು ಮನವಿ ಮಾಡಿದ್ದಾರೆ.




