
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸಲಿದ್ದಾರೆ. ಈ ವೇಳೆ ಮತದಾರರ ಹೆಸರು, ವಿಳಾಸ ಹಾಗೂ ವಯಸ್ಸಿನ ಮಾಹಿತಿಯನ್ನು ಪರಿಶೀಲಿಸುವುದರ ಜೊತೆಗೆ ಅಗತ್ಯ ದಾಖಲೆಗಳ ಪ್ರತಿಗಳನ್ನು ಸಂಗ್ರಹಿಸಲಿದ್ದಾರೆ.
ವಯಸ್ಸಿನ ಮಾಹಿತಿ ನೀಡಲು ಕೊಡಬಹುದಾದ ದಾಖಲೆಗಳು:
1. ಜನ್ಮ ಪ್ರಮಾಣ ಪತ್ರ- Birth Certificate
2. SSLC/10ನೇ ಮಾರ್ಕ್ಸ್ ಕಾರ್ಡ್ – ಹುಟ್ಟಿದ ದಿನಾಂಕ ಇರೋದು
3. ಪಾಸ್ಪೋರ್ಟ್
4. ಮ್ಯಾಟ್ರಿಕ್ಯುಲೇಷನ್ ಸರ್ಟಿಫಿಕೇಟ್
5. ಜಾತಿ ಪ್ರಮಾಣ ಪತ್ರ – Date of birth ಇದ್ರೆ
6. ಪಿಂಚಣಿ/ಸೇವಾ ಪುಸ್ತಕ- Govt Job ಇದ್ರೆ
7. NPR/NRC ಸರ್ಟಿಫಿಕೇಟ್ – 2003-2004 ರದು
8. ಪೌರತ್ವ ಸರ್ಟಿಫಿಕೇಟ್
9. Forest Rights Certificate – ಹಕ್ಕುಪತ್ರ
10. ತಂದೆ-ತಾಯಿ Voter ID- 2002 ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ರೆ
11. LIC ಪಾಲಿಸಿ – 2002 ಕ್ಕೆ ಮುಂಚಿನದು
ಈ 11 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಒದಗಿಸುವಂತೆ ಸೂಚಿಸಲಾಗಿದೆ.ಆಧಾರ್ ಕಾರ್ಡ್ ಗುರುತಿನ ದಾಖಲೆಯಾಗಿ ಬಳಸಬಹುದಾದರೂ, ಜನ್ಮ ದಿನಾಂಕದ ಪುರಾವೆಯಾಗಿ ಮಾತ್ರ ಪರಿಗಣಿಸಲಾಗುವುದಿಲ್ಲ ಎನ್ನಲಾಗಿದೆ. ಇದರ ಜೊತೆಗೆ ಆಧಾರ್ ಕಾರ್ಡ್, ಪ್ರಸ್ತುತ ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ಸಿದ್ಧವಾಗಿರಬೇಕು. BLOಗಳು ಅರ್ಜಿ ಭರ್ತಿ ಮಾಡಿಸಿ ಸಹಿ ಅಥವಾ ಬೆರಳಚ್ಚು ಪಡೆದುಕೊಳ್ಳಲಿದ್ದು, ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಮಾತ್ರ ಸಲ್ಲಿಸಿದರೆ ಸಾಕು, ಮೂಲ ದಾಖಲೆಗಳನ್ನು ಪರಿಶೀಲನೆ ಬಳಿಕ ಹಿಂತಿರುಗಿಸಿಕೊಳ್ಳಬಹುದು. 2002ಕ್ಕೂ ಮುಂಚೆ ಮತದಾರರ ಪಟ್ಟಿಯಲ್ಲಿ ತಂದೆ ಅಥವಾ ತಾಯಿಯ ಹೆಸರು ಇದ್ದಲ್ಲಿ ಕೆಲ ಸಂದರ್ಭಗಳಲ್ಲಿ ಹೆಚ್ಚುವರಿ ದಾಖಲೆಗಳ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದ್ದು, 2002ರ ನಂತರ ಜನಿಸಿದವರಿಗೆ ಜನ್ಮ ದಿನಾಂಕದ ದಾಖಲೆ ಕಡ್ಡಾಯವಾಗಿರಲಿದೆ. BLO ಸೇವೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಅಥವಾ ಹಣ ನೀಡುವ ಅಗತ್ಯವಿಲ್ಲ ಎಂದು ತಿಳಿಸಲಾಗಿದೆ.





