
ತೀರ್ಥಹಳ್ಳಿ: ಇಂದು ತೀರ್ಥಹಳ್ಳಿಯ ದುರ್ವಾಸಪುರಂನ ದ್ವಾರಕಾ ಜಗದ್ಗುರು ಸಂಸ್ಥಾನ ಶ್ರೀ ಕೃಷ್ಣಾನಂದ ಮಠದಲ್ಲಿ ಶ್ರೀಮಠದ ಪ್ರದಾನ ದೇವರಾದ ಶ್ರೀ ಗೋಪಾಲಕೃಷ್ಣ ಸ್ವಾಮಿಯ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಜೂನ್ 14 ರಿಂದ 4 ದಿನಗಳ ಪರ್ಯಂತ ನಡೆದ ಈ ಕಾರ್ಯಕ್ರಮ ಧಾರ್ಮಿಕ ಸಂಭ್ರಮದೊಂದಿಗೆ ಸಾಗಿ
ಆದ್ಯಗಣಯಾಗ, ಪುಣ್ಯಾಹ, ವಿವಿಧ ಹೋಮ-ಹವನಗಳು, ಪೂಜೆಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ನಡೆದವು. ಮಹಾಸ್ವಾಮೀಜಿಗಳವರ ಆಗಮನದ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಸಂಭ್ರಮ ಮನೆಮಾಡಿತ್ತು.
ಮಠಾಧಿಪತಿಗಳಾದ ಶ್ರೀ ಶ್ರೀ ಗೋಪಾಲನಂದ ತೀರ್ಥ ಸ್ವಾಮಿಗಳವರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿದ್ದು, ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರು ಅನುಗ್ರಹ ಸಂದೇಶ ನೀಡಿ ಫಲಮಂತ್ರಾಕ್ಷತೆ ನೀಡುವುದರ ಮೂಲಕ ಭಕ್ತರನ್ನು ಅನುಗ್ರಹಿಸಿದರು.
ಮಹೋತ್ಸವದ ಯಶಸ್ವಿಗಾಗಿ ಮಠದ ಆಡಳಿತ ಮಂಡಳಿ ಹಾಗೂ ಭಕ್ತರು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದರು. ಜಗದ್ಗುರುಗಳವರ ಪವಿತ್ರ ಸಾನ್ನಿಧ್ಯದಿಂದ ಮಹೋತ್ಸವದ ಧಾರ್ಮಿಕ ವೈಭವ ಮತ್ತಷ್ಟು ಹೆಚ್ಚಿದ್ದು, ತೀರ್ಥಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಕ್ತಿಯ ವಾತಾವರಣ ನಿರ್ಮಾಣವಾಗಿತ್ತು. ನೂರಾರು ಭಕ್ತರು ಗುರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಶ್ರೀ ಗೋಪಾಲಕೃಷ್ಣ ಸ್ವಾಮಿಯ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://www.youtube.com/live/vEc0izvKjW4?si=Qr-CxfuhRjeE4E13




