
ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಚಾಮರಾಜನಗರ ಜಿಲ್ಲೆಯಾಗಿ 30 ವರ್ಷ ಸಂದರ್ಭದ ಕೃತಜ್ಞತೆ, ಸಂಭ್ರಮ, ಅಭಿವೃದ್ಧಿ ಚಿಂತನೆ, ಅಭಿಪ್ರಾಯ ಕಾರ್ಯಕ್ರಮ ಜರಗಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ ಐತಿಹಾಸಿಕ ಸಂಸ್ಕೃತಿ,ಪರಂಪರೆ, ಜಾನಪದ ವೈಶಿಷ್ಟವನ್ನು, ಇತಿಹಾಸವನ್ನು ಹೊಂದಿರುವ ಅ ರಿಕೊಠಾರವಾಗಿದ್ದ ಗ್ರಾಮವನ್ನು ಮೈಸೂರು ಅರಸ ಚಾಮರಾಜ ಒಡೆಯರ್ ಜನಿಸಿದ ನೆನಪಿಗಾಗಿ ಶ್ರೀ ಚಾಮರಾಜೇಶ್ವರ ದೇವಸ್ಥಾನವನ್ನು ನಿರ್ಮಾಣ ಮಾಡಿ, ಚಾಮರಾಜನಗರ ಎಂಬ ಹೆಸರಿನ ಬಿಟ್ಟು 200 ವರ್ಷಗಳಾಗಿ ಮೈಸೂರು ಜಿಲ್ಲೆಯಲ್ಲಿ ಇದ್ದ ಚಾಮರಾಜನಗರವನ್ನು 1997ರಲ್ಲಿ ಜಿಲ್ಲೆಯನ್ನಾಗಿ ರೂಪಿಸಿದ ಅಂದಿನ ಮುಖ್ಯಮಂತ್ರಿ ಜೆ ಹೆಚ್ ಪಟೇಲ್,. ಹಿರಿಯರಾದ ಬಿ. ರಾಚಯ್ಯ, ವಾಟಾಳ್ ನಾಗರಾಜ್, ರವರಿಗೆ ಹಾಗೂ ಶ್ರಮಿಸಿದ ಎಲ್ಲಾ ಗೌರವಾನ್ವಿತ ಜನಪ್ರತಿನಿಧಿಗಳಿಗೆ, ಹೋರಾಟ ಮಾಡಿದ ಸಾರ್ವಜನಿಕರಿಗೆ, ಜಿಲ್ಲೆಗೆ ಶ್ರಮಿಸಿದ ಎಲ್ಲಾ ವರ್ಗದವರಿಗೆ ಹಾಗೂ ಚೆಲುಯಾಗಿ 30 ವರ್ಷಗಳ ನಂತರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲಾ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳಿಗೆ ಸಂಘ ಸಂಸ್ಥೆಗಳಿಗೆ ಧನ್ಯವಾದಗಳನ್ನು ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನೂತನ ಜಿಲ್ಲೆಯಿಂದ ಚಾಮರಾಜನಗರ ರಾಷ್ಟ್ರದಲ್ಲಿ ತನ್ನದೇ ಆದ ವೈಶಿಷ್ಟತೆಯ ಮೂಲಕ ಗುರುತಿಸಿಕೊಂಡು ಹೊಸ ದಿಕ್ಕಿನಲ್ಲಿ ಅಭಿವೃದ್ಧಿಯನ್ನು ಕಾಣಲು ಕಾರಣವಾಗಿದೆ. 30 ವರ್ಷಗಳು ತುಂಬಿರುವ ಚಾಮರಾಜನಗರ ಇಂದು ಅಭಿವೃದ್ಧಿಯ ಪತದತ್ತ ಸಾಗಿರುವುದಕ್ಕೆ ನಮಗೆಲ್ಲರಿಗೂ ಸಂತೋಷ ಮತ್ತು ಸಂಭ್ರಮ ಪಡುವ ಕಾಲವಾಗಿದೆ ಅಂದುಕೊಂಡಷ್ಟು ಆಗದಿದ್ದರೂ ಮುಂದುವರೆಯುತ್ತಿರುವುದು ಪ್ರಗತಿಯ ಸಂಕೇತ. ಶಿಕ್ಷಣ, ಕೈಗಾರಿಕೆ, ವೈದ್ಯಕೀಯ ಆರೋಗ್ಯ, ನೀರಾವರಿ, ರಸ್ತೆ ಸಾರಿಗೆ,ಸೇತುವೆಗಳ ನಿರ್ಮಾಣ, ಕೃಷಿ, ನೀರಾವರಿ,ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ವೈದ್ಯಕೀಯ ಕಾಲೇಜು, ಕೃಷಿ ಕಾಲೇಜು, ಚಾಮರಾಜನಗರ ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜು, ಡಿಪ್ಲೋಮೋ ಕಾಲೇಜ್ ಹತ್ತು ಹಲವು ಕಾಲೇಜುಗಳು ಆರಂಭಗೊಂಡಿದ್ದು, ಮುಂದಿನ ಭವಿಷ್ಯ ಶಿಕ್ಷಣದ ಪ್ರಗತಿ, ಉದ್ಯೋಗದ ಸೃಷ್ಟಿಯ ಮೂಲಕ ತನ್ನದೇ ಆದ ನೆಲೆಯನ್ನು ಕಟ್ಟಿಕೊಳ್ಳುವ ಮೂಲಕ ಯುವಕರು ಮತ್ತು ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅಭಿವೃದ್ಧಿ ನಮ್ಮೆಲ್ಲರ ಹಕ್ಕು. ಅಭಿವೃದ್ಧಿಗಾಗಿ ನಮ್ಮ ಶ್ರಮ, ಬದ್ಧತೆ,ದೃಢತೆ, ಯೋಜನೆ ಯೋಚನೆ ಸಾಧನೆ ಅಗತ್ಯವಾಗಿದೆ. ನಾಗರಿಕರು,
ಸಂಘ ಸಂಸ್ಥೆಗಳು ನಿರಂತರವಾಗಿ ಸರ್ಕಾರದ ಗಮನ ಸೆಳೆದು ಅಗತ್ಯವಿರುವ ಎಲ್ಲಾ ಕಾರ್ಯವನ್ನು ಸುಸೂತ್ರವಾಗಿ ಜಾರಿಗೆ ಬರುವಂತೆ ಮಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚಾಮರಾಜನಗರ ಜಿಲ್ಲೆಯಾಗಿ ರೂಪಿತವಾಗಿದ್ದು ಮತ್ತಷ್ಟು ಸುಂದರವಾಗಿ ಸದೃಢವಾಗಿ ಬೆಳೆಯಬೇಕು. ಶಾಸಕಾಂಗ ಕಾರ್ಯಾಂಗ ಹಾಗೂ ನಾಗರೀಕರ ಏಕಮುಖ ಪ್ರಗತಿ ಅಗತ್ಯವಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ವರಿಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ಋಗ್ವೇದಿ ತಿಳಿಸಿದರು.
ಪ್ರಾಚಾರ್ಯ ಕಾಗಲವಾಡಿ ರಂಗಸ್ವಾಮಿ ಮಾತನಾಡಿ ಚಾಮರಾಜನಗರ ಜಿಲ್ಲೆ , ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಸ್ಥಾಪಿತವಾಗಿ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಪ್ರತಿಯೊಬ್ಬರು ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂದರು.
ಮಾಜಿ ನಗರ ಸಭಾ ಸದಸ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಪದ್ಮ ಪುರುಷೋತ್ತಮ್ ಮಾತನಾಡಿ ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಬೇಕು. ಮಹಿಳಾ ಪ್ರಗತಿಯಿಂದ ಸಮಾಜ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಜನಪದ ಗಾಯಕ ರವಿಚಂದ್ರಪ್ರಸಾದ್ ಕಹಳೆ ಮಾತನಾಡಿ ಚಾಮರಾಜನಗರ ಜಿಲ್ಲೆ, ಜೆ ಹೆಚ್ ಪಟೇಲ್ ರವರು ಮುಖ್ಯಮಂತ್ರಿ ಆಗಿದ್ದಾಗ ಘೋಷಣೆಯಾಯಿತು. ಚಾಮರಾಜನಗರ ವಿಧಾನಸಭೆಯ ಶಾಸಕರಾದ ವಾಟಾಳ್ ನಾಗರಾಜ್ ಹಿರಿಯರಾದ ಬಿ ರಾಜಯ್ಯ, ಶ್ರೀನಿವಾಸ ಪ್ರಸಾದ್, ಧ್ರುವನಾರಾಯಣ್,ಎಂ ಮಹದೇವ ಪ್ರಸಾದ್ ಎಂ ಮಹದೇವು ಜಿಎನ್ ನಂಜುಂಡಸ್ವಾಮಿ,ನರೇಂದ್ರ, ಪ್ರೊಫೆಸರ್ ಮಲ್ಲಿಕಾರ್ಜುನಪ್ಪ ಹಾಗೂ ಜಿಲ್ಲೆಗಾಗಿ ಹೋರಾಟ ರೂಪಿಸಿದ ಜಿಲ್ಲಾ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೂ ಹೋರಾಟ ನಡೆಸಿದ ಎಲ್ಲಾ ವರ್ತಕರು, ವಕೀಲರು,ರೈತರು,ಮಹಿಳೆಯರು, ಯುವಕರು ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಸದಾ ಕಾಲ ಗೌರವವನ್ನು ನೀಡುತ್ತೇವೆ. ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜನಗರ ಜಿಲ್ಲೆಯಾಗಿ 30 ವರ್ಷದ ಸಂಭ್ರಮವನ್ನು ಆಚರಿಸಿ ಅಭಿವೃದ್ಧಿಯ ದಿಕ್ಕಿನಲ್ಲಿ ಯೋಚನೆ ಮಾಡುವ ಕಾರ್ಯಕ್ರಮ ರೂಪಿಸಿರುವ ಅಧ್ಯಕ್ಷರಾದ ಋಗ್ವೇದಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.
ಚಿತ್ರ ಕಲಾವಿದರಾದ ಮೊಹಮ್ಮದ್ ಗೌಸ್ ಮಾತನಾಡಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಪ್ರೋತ್ಸಾಹ, ಹಾಗು ಆರ್ಟ್ಸ್ ಗ್ಯಾಲರಿ ಆರಂಭವಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗಮೂರ್ತಿ ಜಿಲ್ಲೆಯ ಸ್ವರೂಪ ಬದಲಾಗಬೇಕು. ಹೊಸ ರಸ್ತೆಗಳು, ಬಡಾವಣೆ ಗಳು ರೂಪುಗೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ನಿವೃತ್ತ ಶಿಕ್ಷಕಿ ಸರಸ್ವತಿ, ಗೀತಾ, ಸಂಘಟಕ ಗೌರಿಶಂಕರ್, ಮಹೇಂದ್ರ, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಸುರೇಶ್ ದೊಡ್ಡಮೋಳೆ, ಗಜೇಂದ್ರ, ಇದ್ದರು.
ಚಾಮರಾಜನಗರ ಜಿಲ್ಲೆ 30 ವರ್ಷದ ಸಂಭ್ರಮದಲ್ಲಿ ಗಾಯಕರಾದ ಕಾಗಲವಾಡಿ ರಂಗಸ್ವಾಮಿ, ಮಹಮದ್, ಶಿವಲಿಂಗ ಮೂರ್ತಿ, ರವಿಚಂದ್ರನ್ ಪ್ರಸಾದ್ ಕರ್ನಾಟಕ ಗಮಕ ಕಲಾಪರಿಷತ್ತಿನ ವೀರಶೆಟ್ಟಿ ರವರು ಗಾಯನ ಕಾರ್ಯಕ್ರಮ ನೆರವೇರಿಸಿದರು.




