
ಕಾರ್ಕಳ: ನಮ್ಮ ಬದುಕಿಗೆ “ಶುದ್ಧ ಗಾಳಿ,ನೀರು ಮತ್ತು ಬೆಳಕು” ತೀರಾ ಅವಶ್ಯ – ರೊ. ಶ್ರೀಧರ್ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೂಡುಬಿದಿರೆ ಇವರು ವಿದ್ಯಾರ್ಥಿ ಸಮೂಹಕ್ಕೆ ಹೀಗೆ ಕರೆ ನೀಡಿದರು. ಮುರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು,ಮಿಯಾರು, ಕಾರ್ಕಳ ಇಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಪ್ರಾಯೋಜಕತ್ವದಲ್ಲಿ ಸಂಸ್ಥೆಯ ಆವರಣದಲ್ಲಿ ‘ಧನ್ಯವಾದ್’ ಯೋಜನೆಯಡಿಯಲ್ಲಿ 100ಕ್ಕಿಂತಲೂ ಹೆಚ್ಚಿನ ವಿವಿಧ ಪ್ರಭೇದಗಳ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪರಿಸರದ ಸಂರಕ್ಷಣೆ ಬಗ್ಗೆ ಅತ್ಯುತ್ತಮ ಸಂದೇಶವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಮಾರ್ಗದರ್ಶಕರು ಹಾಗೂ “ಧನ್ಯವಾದ್ – ವೃಕ್ಷ ಸಂವರ್ಧನಾ ಯೋಜನೆ” ಇದರ ರೋಟರಿ ಜಿಲ್ಲಾ ಅಧ್ಯಕ್ಷರೂ ಆಗಿರುವ ಮಾಜಿ ಜಿಲ್ಲಾ ಗವರ್ನರ್ ರೊ.ಡಾll ಭರತೇಶ್ ಆದಿರಾಜ್ ರವರು ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ರೋಟರಿಯ ಧ್ಯೇಯೋದ್ದೇಶ ಗಳಲ್ಲಿ ಒಂದಾದ ಪರಿಸರ ಸಂರಕ್ಷಣೆ ಬಗ್ಗೆ ತಿಳಿಸಿ ಇದಕ್ಕೆ ಪೂರಕವಾಗಿ ಕೈಗೊಂಡ ‘ಧನ್ಯವಾದ್ ‘- ವೃಕ್ಷ ಸಂವರ್ಧನಾ ಕಾರ್ಯಕ್ರಮದ ಔಚಿತ್ಯ ಗಳನ್ನು ತಿಳಿಸಿದರು. ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ. ಮಂಜುನಾಥ ಹೆಗ್ಡೆಯವರು ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮಲ್ಲಿಕಾರ್ಜುನ ಕುರಿಯವರು ಮಾತನಾಡಿ ರೋಟರಿ ಚಟುವಟಿಕೆಗಳ ಬಗ್ಗೆ ಅತೀವ ಸಂತಸ ಹಾಗೂ ಹೆಮ್ಮೆ ಪಟ್ಟು ಇಂತಹ ಯೋಜನೆಯಲ್ಲಿ ತಮ್ಮ ಸಂಸ್ಥೆಯನ್ನು ತೊಡಗಿಸಿ ಕೊಂಡದ್ದಕ್ಕೆ ಧನ್ಯವಾದಗಳನ್ನು ವ್ಯಕ್ತಪಡಿಸಿದರು. ಸಂಸ್ಥೆಯ ವಿದ್ಯಾರ್ಥಿನಿಯರು “ವಂದೇ ಮಾತರಂ” , ರಾಷ್ಟ್ರೀಯ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ತದನಂತರ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಗೊಳಿಸಿದ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಅತಿಥಿಗಳು ಚಾಲನೆ ನೀಡಿದರು. ಸಂಸ್ಥೆಯ ಎಲ್ಲಾ ಉಪನ್ಯಾಸಕ ವೃಂದದವರ ಮೇಲ್ವಿಚಾರಣೆಯಲ್ಲಿ ಹಾಗೂ ಇತರ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಸಂಸ್ಥೆಯ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಈ ಚಟುವಟಿಕೆಯಲ್ಲಿ ಸಕ್ರಿಯವಾಗಿ ಮತ್ತು ಸಂಭ್ರಮದಿಂದ ಭಾಗವಹಿಸಿದರು.
ರೋಟರಿ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷರಾದ ರೊ ಸುರೇಂದ್ರ ನಾಯಕ್, ಪೂರ್ವ ಅಧ್ಯಕ್ಷರುಗಳಾದ ರೊ.ಸುರೇಶ್ ನಾಯಕ್, ಮತ್ತು ರೊ. ಉಪೇಂದ್ರ ವಾಗ್ಲೆ.ಕ್ಲಬ್ಬಿನ ಕೋಶಾಧಿಕಾರಿ ರೊ.ಪ್ರಶಾಂತ್ ಜೈನ್.ರೊ.ರಮೇಶ್ ಶೆಟ್ಟಿ , ಆನ್ಸ್ ಅಧ್ಯಕ್ಷೆ ಶರ್ಮಿಳಾ ಶೆಟ್ಟಿ.ಆನೆಟ್ ಸೃಷ್ಟಿ.ಆರ್ ಶೆಟ್ಟಿ,ರೊ ಫೆಲಿಕ್ಸ್ ವಾಜ್ ರೊ.ಅಬ್ದುಲ್ ರಹೆಮಾನ್ ,ರೊ.ಪ್ರಕಾಶ್ ವಾಗ್ಲೆ ಪಾಲ್ಗೊಂಡಿದ್ದರು.
ರೊ. ಸುಜಯ್ ರವರು ತಮ್ಮ JCB ಮೂಲಕ ಎಲ್ಲಾ ಗಿಡಗಳನ್ನು ನೆಡುವಲ್ಲಿ ಅಗತ್ಯವಿರುವ ಕಾಮಗಾರಿ ವ್ಯವಸ್ಥೆಯನ್ನು ಮಾಡಿದ ಕೊಡುಗೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು . ಸಂಸ್ಥೆಯ ಉಪನ್ಯಾಸಕಿ ಹಾಗೂ ನಿಲಯ ಪಾಲಕರಾದ ಡಾll ತುಲಸೀ ಗಾಯತ್ರಿ ದೇವಿ, ಉಪನ್ಯಾಸಕರಾದ ಶ್ರೀ ಗುರುರಾಜ್, ಶ್ರೀ ಪ್ರವೀಣ್, ಶ್ರೀ ಮತಿ ಸುಪ್ರೀತಾ ,ಎಲ್ಲಾ ಸಿಬ್ಬಂದಿ ವರ್ಗದವರು , ಅಡುಗೆ ಸಿಬ್ಬಂದಿ ವರ್ಗದವರು ಸಕ್ರಿಯವಾಗಿ ಪಾಲ್ಗೊಂಡು ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ರೋಟರಿ ಸಂಸ್ಥೆಯ ಕಾರ್ಯದರ್ಶಿ ವಿಶ್ರಾಂತ ಪ್ರಾಶುಪಾಲರಾದ ರೋ ಗಣೇಶ್ ಬರ್ಲಾಯ ರವರು ವಂದಿಸಿದರು.




