
ಮೈಸೂರು: ದೇವರ ದರ್ಶನದ ಕನಸು ಹೊತ್ತು ತಿರುಪತಿ ಪ್ರವಾಸಕ್ಕೆ ಹೊರಟಿದ್ದ ಮೈಸೂರಿನ ಸರಸ್ವತಿಪುರಂ ನಿವಾಸಿ 67 ವರ್ಷದ ಮಹಿಳೆ ಹೋಟೆಲ್ ಬುಕ್ಕಿಂಗ್ ಮಾಡುವ ವೇಳೆ Google Listing Scam ಗೆ ಸಿಲುಕಿ ಒಟ್ಟು ₹4,99,242 ಕಳೆದುಕೊಂಡಿರುವ ಘಟನೆ ನಡೆದಿದೆ. ತಿರುಪತಿ ಪ್ರವಾಸಕ್ಕೆ Tirupatiಯಲ್ಲಿ ಇರುವ “Court Yard Marriott” ಹೋಟೆಲ್ ಬುಕ್ ಮಾಡಲು ಗೂಗಲ್ನಲ್ಲಿ ನಕಲಿ ನಂಬರ್ ಹುಡುಕಿ ಕರೆ ಮಾಡಿದಾಗ ವಂಚಕರು ಕೇವಲ ₹5,250 ಬುಕ್ಕಿಂಗ್ ಶುಲ್ಕಕ್ಕೆ ಡೆಬಿಟ್ ಕಾರ್ಡ್ ವಿವರ ಕೇಳಿ ನಂತರ ಅವರ ಕೆನರಾ ಬ್ಯಾಂಕ್ ಖಾತೆಯಿಂದ ₹46,386 ಕಡಿತಗೊಳಿಸಿದ್ದಾರೆ. ನಂತರ ಹಣ ಮರಳಿ ನೀಡುವುದಾಗಿ ನಂಬಿಸಿ “ಅಂತರಾಷ್ಟ್ರೀಯ ಕಾರ್ಡ್ ಮಾಹಿತಿ ಬೇಕು” ಎಂದು ಹೇಳಿ ಮಹಿಳೆಯ ಮಗನ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮಾಹಿತಿಯನ್ನೂ ಪಡೆದು ಮಗನ ಕ್ರೆಡಿಟ್ ಕಾರ್ಡ್ನಿಂದ ₹2,99,507, ಡೆಬಿಟ್ ಕಾರ್ಡ್ನಿಂದ ₹1,15,201 ಹಾಗೂ ಮಹಿಳೆಯ ಕಾರ್ಡ್ನಿಂದ ₹46,386 ಮತ್ತು ₹38,148 ಸೇರಿ ಒಟ್ಟು ₹4,99,242 ವಂಚನೆ ಮಾಡಿದ್ದಾರೆ. ಈ ಪ್ರಕರಣವನ್ನು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಇದು ಕ್ಲಾಸಿಕ್ “Hotel Booking Scam” ಅಥವಾ “Google Listing Scam” ಎಂದು ಪೊಲೀಸರು ಹೇಳಿದ್ದು, ತಿರುಪತಿ, ಪುರಿ, ವಾರಾಣಸಿ ಮುಂತಾದ ತೀರ್ಥಯಾತ್ರಾ ಸ್ಥಳಗಳಿಗೆ ತೆರಳುವ ಹಿರಿಯ ನಾಗರಿಕರನ್ನು ಗುರಿ ಮಾಡಿಕೊಂಡು ವಂಚಕರು ಇಂತಹ ಮೋಸ ನಡೆಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ. ವಂಚನೆಯಿಂದ ತಪ್ಪಿಸಿಕೊಳ್ಳಲು OTP, CVV, ಕಾರ್ಡ್ ನಂಬರ್ ಹಂಚಬಾರದು, ತಿರುಪತಿ ವಸತಿಗೆ ಅಧಿಕೃತ ವೆಬ್ಸೈಟ್ https://ttdevasthanams.ap.gov.in/ ಅಥವಾ www.tirumala.org ಹಾಗೂ TTDevasthanams App ಬಳಸಬೇಕು ಎಂದು ಸೂಚಿಸಲಾಗಿದ್ದು, ವಂಚನೆ ಸಂಭವಿಸಿದ ತಕ್ಷಣ 1930 ಸೈಬರ್ ಕ್ರೈಮ್ ಹೆಲ್ಪ್ಲೈನ್ ಅಥವಾ cybercrime.gov.in ಗೆ ದೂರು ನೀಡಲು ಹಾಗೂ ಬ್ಯಾಂಕ್ಗೆ ಸಂಪರ್ಕಿಸಿ ಕಾರ್ಡ್ ಬ್ಲಾಕ್ ಮಾಡಿಸಲು ಪೊಲೀಸರು ಮನವಿ ಮಾಡಿದ್ದಾರೆ.




