
ಮೂಡಿಗೆರೆ: ಸಹೋದರತ್ವ, ಪ್ರೀತಿ ಹಾಗೂ ಪರಸ್ಪರ ರಕ್ಷಣೆಯ ಸಂಕೇತವಾದ ರಕ್ಷಾಬಂಧನ ಹಬ್ಬವನ್ನು ಮೂಡಿಗೆರೆಯಲ್ಲಿ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಲಾಯಿತು. ಮೂಡಿಗೆರೆಯ ಭರತ್ ಸರ್ಕಲ್ ಬಳಿಯ ನಂದಿನಿ ಹಾಲಿನ ಡೈರಿಯಲ್ಲಿ ನಡೆದ ರಕ್ಷಾಬಂಧನದ ವಿಶೇಷ ಕ್ಷಣ ಎಲ್ಲರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಯುವತಿಯೊಬ್ಬರು ಪ್ರೀತಿಯಿಂದ ರಾಖಿ ಕಟ್ಟಿ ರಕ್ಷಾಬಂಧನದ ಶುಭಾಶಯ ಕೋರಿದರು. ಧರ್ಮದ ಗಡಿಗಳನ್ನು ಮೀರಿ ಪ್ರೀತಿ, ಮಾನವೀಯತೆ ಹಾಗೂ ಸಹೋದರತ್ವಕ್ಕೆ ಮಹತ್ವ ನೀಡಿದ ಈ ಕ್ಷಣ, ರಕ್ಷಾಬಂಧನದ ನಿಜವಾದ ಸಂದೇಶವನ್ನು ಸಾರಿತು. ವಿಭಿನ್ನ ಧರ್ಮಗಳ ನಡುವೆಯೂ ಪರಸ್ಪರ ಗೌರವ ಮತ್ತು ಸೌಹಾರ್ದತೆಯ ಬಾಂಧವ್ಯ ಬೆಸೆಯಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಯಿತು. ರಕ್ಷಾಬಂಧನ ಕೇವಲ ಒಂದು ಹಬ್ಬವಾಗಿರದೆ, ಪ್ರೀತಿ, ವಿಶ್ವಾಸ, ಗೌರವ ಮತ್ತು ಸಹೋದರತ್ವದ ಭಾವನೆಗಳನ್ನು ಗಟ್ಟಿಗೊಳಿಸುವ ಆಚರಣೆಯಾಗಿದೆ. ಮೂಡಿಗೆರೆಯ ನಂದಿನಿ ಹಾಲಿನ ಡೈರಿಯಲ್ಲಿ ಕಂಡುಬಂದ ಈ ಸೌಹಾರ್ದದ ಕ್ಷಣ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ವರದಿ: ಸಂತೋಷ್ ಅತ್ತಿಗೆರೆ




