
ಚಿಕ್ಕಮಗಳೂರು: ಇತ್ತೀಚೆಗೆ ಶೃಂಗೇರಿ ಕ್ಷೇತ್ರದಲ್ಲಿ ನಡೆದ ಚುನಾವಣೆಯ ಮರುಮತ ಎಣಿಕೆಯಲ್ಲಿ ಬಂದ ಫಲಿತಾಂಶ ನಂತರ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ. ಈ ನಡುವೆ ಜೀವರಾಜ್ ವಿರುದ್ಧ ದಾಖಲಾಗಿದ್ದ FIR ಪ್ರಕರಣಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿರುವ ಬೆಳವಣಿಗೆ ಹೊಸ ಚರ್ಚೆಗೆ ಕಾರಣವಾಗಿದ್ದು, ಚುನಾವಣಾ ಹಿನ್ನಲೆಯಲ್ಲಿ ಉದ್ಭವಿಸಿದ ಈ ಪ್ರಕರಣ ರಾಜಕೀಯವಾಗಿ ಗಮನ ಸೆಳೆದಿದೆ. ವಿರೋಧಿ ಪಕ್ಷಗಳು ಮತ್ತು ಬೆಂಬಲಿಗರ ಮಧ್ಯೆ ಆರೋಪ–ಪ್ರತ್ಯಾರೋಪಗಳು ಹೆಚ್ಚಾಗಿದ್ದು, ಪ್ರಕರಣದ ಕುರಿತಾಗಿ ಕಾನೂನು ಹೋರಾಟ ಮುಂದುವರಿದಿದೆ. ಹೈಕೋರ್ಟ್ ನೀಡಿದ ತಾತ್ಕಾಲಿಕ ತಡೆ ಆದೇಶದಿಂದ ಜೀವರಾಜ್ ಅವರಿಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ. ಇತ್ತ ಶೃಂಗೇರಿ ಕ್ಷೇತ್ರದ ಚುನಾವಣಾ ಫಲಿತಾಂಶದ ಹಿನ್ನಲೆಯಲ್ಲಿ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.




