
ಕೊಟ್ಟಿಗೆಹಾರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಣಕಲ್ ಸಮೀಪದ ದೊಡ್ಡನಂದಿ ಗ್ರಾಮದ ವಿದ್ಯಾರ್ಥಿನಿ ಎ.ಪಿ. ಅಪೇಕ್ಷಾ 621 ಅಂಕಗಳನ್ನು ಪಡೆದು ಶೇ. 99 ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮಲೆನಾಡಿಗೆ ಕೀರ್ತಿ ತಂದಿದ್ದಾರೆ. ಮೈಸೂರಿನ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಅಪೇಕ್ಷಾ, ಮೂಲತಃ ಬಣಕಲ್ ದೊಡ್ಡನಂದಿ ಗ್ರಾಮದ ಎ.ಎ. ಪ್ರಸನ್ನ ಹಾಗೂ ಎ.ಎನ್. ಅನ್ಸೂಯ ದಂಪತಿಗಳ ಪುತ್ರಿಯಾಗಿದ್ದು, ಅವರ ಈ ಸಾಧನೆಗೆ ಪೋಷಕರು ಹಾಗೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.




