ಚಾಮರಾಜನಗರ : ಶಂಕರಪುರ ಶ್ರೀರಾಮ ಮಂದಿರದಲ್ಲಿ ಶಂಕರ ಜಯಂತಿ ಅಂಗವಾಗಿ ಪ್ರಾತಃಕಾಲ 8ಗಂಟೆಗೆ ಪಂಚಾಮೃತ ಸಮೇತ ಶ್ರೀ ರುದ್ರಾಭಿಷೇಕ,ಶಂಕರ ಅಷ್ಟೋತ್ತರ ಪಾರಾಯಣ ನಡೆಯಲಿದೆ.
ಸಂಜೆ 7 ಗಂಟೆಗೆ ವಿಷ್ಣು ಸಹಸ್ರನಾಮ, ಶ್ರೀ ಶಂಕರಾಚಾರ್ಯರ ಸ್ತೋತ್ರಗಳ ಗಾಯನ ಹಾಗೂ ಶ್ರೀ ಶಂಕರರ ಜೀವನ ಮತ್ತು ಕೊಡುಗೆಗಳ ಕುರಿತು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಅವರಿಂದ ಉಪನ್ಯಾಸ, ಮಹಾಮಂಗಳಾರತಿ ಜರುಗಲಿದೆ ಎಂದು ಶ್ರೀರಾಮ ಮಂದಿರದ ಅಧ್ಯಕ್ಷರಾದ ಪ್ರತಾಪ್ ಹಾಗೂ ಕಾರ್ಯದರ್ಶಿ ಸತೀಶ್ ರವರು ತಿಳಿಸಿದ್ದಾರೆ.
