
ಚಾಮರಾಜನಗರ: ಶಂಕರ ಪುರಶ್ರೀ ರಾಮ ಮಂದಿರದಲ್ಲಿ ಶ್ರೀ ಹನುಮಂತೋತ್ಸವ, ಓಕುಳಿ ಕಾರ್ಯಕ್ರಮ ಜರುಗಿತು.
ವಿಶೇಷ ಪೂಜೆ ಹಾಗೂ ಮನೆಮನೆಗಳಿಗೆ ಆಂಜನೇಯನ ಮೆರವಣಿಗೆ ತೆರಳಿ ತದನಂತರ ಶಂಕರಪುರಂ ನಲ್ಲಿ ವಿಶೇಷ ಓಕುಳಿ ಕಾರ್ಯಕ್ರಮ ಸಂಭ್ರಮ ಸಡಗರ ಸಂತೋಷ ನಿಂದ ನೂರಾರು ಭಕ್ತರು ಭಾಗವಹಿಸಿದ್ದರು. ಚಿಕ್ಕ ಮಕ್ಕಳಂತೂ ವಿಶೇಷವಾಗಿ ಕುಣಿದು ಕುಪ್ಪಳಿಸಿದರು . ಪರಸ್ಪರ ನೀರಿನ ಎರಚಾಟ ಪನ್ನೀರಿನ ಬಳಕೆ ದೇಹಕ್ಕೆ ಹಾಗೂ ಮನಸ್ಸಿಗೆ ತುಂಬಾ ಆನಂದವನ್ನು ಉಂಟು ಮಾಡಿತು.ಕಳೆದ ಆರು ಏಳು ದಶಕಗಳಿಂದ ನಿರಂತರವಾಗಿ ಶ್ರೀರಾಮ ನವಮಿ ಪಟ್ಟಾಭಿಷೇಕ ಹಾಗೂ ಹನುಮಂತೋತ್ಸವ ವಿಶೇಷವಾಗಿ ಜರುಗುತ್ತಿದೆ.
ಓಕಳಿಗೆ ಹರಿಶಿನ, ಕುಂಕುಮ, ಶ್ರೀಗಂಧ ,ಹಾಗೂ ಪರಿಮಳ ಯುಕ್ತ ವಿಶೇಷ ಹೂಗಳಿಂದ ಪುಷ್ಪ ಮತ್ತು ಎಲೆಗಳಿಂದ ತಯಾರಿಸಲ್ಪಟ್ಟ ರಸಗಳನ್ನು ಓಕಳಿಗೆ ಸಾಂಪ್ರದಾಯಕವಾಗಿ ಬಳಸಿ ಓಕಳಿ ನಡೆಸುವುದು ಇಲ್ಲಿಯ ವಿಶೇಷವಾಗಿದೆ. ಓಕಳಿಯ ವಿಶೇಷ ಪ್ರಾರ್ಥನೆ ನಂತರ ಶಂಕರ ಪುರಂ ನ ಮನೆಗಳ ಮುಂಭಾಗದಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿ ಪರಸ್ಪರ ನೀರನ್ನು ಹಾಕುವ ಮೂಲಕ ಬಾಲಕರಿಂದ ವೃದ್ಧರವರೆಗೂ ನೂರಾರು ಜನರು ಭಾಗವಹಿಸಿದ್ದರು .
ಶ್ರೀರಾಮ ಮತ್ತು ಹನುಮಂತನ ಸ್ಮರಣೆಯ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ಜರಗಿತು.




