
ಕೊಳ್ಳೇಗಾಲ: ಕಸದಿಂದ ರಸ ಎಂಬ ನಾಣ್ಣುಡಿಯಂತೆ ಈ ತ್ಯಾಜ್ಯ ಪರಿಸರವನ್ನು ಸೇರಿ, ಉಂಟಾಗಬಹುದಾದ ಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ,ಮುಗ್ಧ ಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ವಲಯ ಅರಣ್ಯ ಅಧಿಕಾರಿ ವಾಸು ಬಿ. ಎಸ್. ತಿಳಿಸಿದರು. ಕೊಳ್ಳೇಗಾಲ ತಾಲೂಕಿನ ಹಿತ್ತಲ ದೊಡ್ಡಿ,ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ,ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ರೋಟರಾಕ್ಟ್ ಕ್ಲಬ್, ರೋಟರಾಕ್ಟ್ ಕ್ಲಬ್ ಆಫ್ ಬೆಂಗಳೂರು ನಾಗಸಂದ್ರ ಮತ್ತು ಬಿ. ಆರ್. ಟಿ.ಹುಲಿ ಸಂರಕ್ಷಿತ ಪ್ರದೇಶ ಚಾಮರಾಜನಗರ, ಕೊಳ್ಳೇಗಾಲ ವನ್ಯಜೀವಿ ವಲಯ, ಕೊಳ್ಳೇಗಾಲ, ರವರ ಸಹಯೋಗದಲ್ಲಿ ಆಯೋಜಿಸಿದ್ದ“ಚಂದನವನ ೨.೦” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಇ ತ್ಯಾಜ್ಯ ಸಂಗ್ರಹದ ದೃಷ್ಟಿಕೋನ ಸಾಮಾಜಿಕ ಜವಾಬ್ದಾರಿಯ ಪರಿಕಲ್ಪನೆಯ ಜೊತೆ ಪರಿಸರ ಸಂರಕ್ಷಣೆ ಬದ್ಧತೆಯಿಂದ ಕೂಡಿದ್ದು,
ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಿ ದೈಹಿಕ ಸಮರ್ಥತೆಯನ್ನು ಕಾಪಾಡಿ ಕೊಂಡು ಆರೋಗ್ಯಯುತ ಜೀವನವನ್ನು ನಡೆಸಬೇಕು ಎಂದು ಹೇಳಿದರು. ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯದ ರೋಟರಾಕ್ಟ್ ಕ್ಲಬ್, ನ ಅಧ್ಯಕ್ಷೆ ಕಾರ್ಕಲ ವೆನ್ನೆಲಾ ಮಾತನಾಡಿ
“ಸ್ವಯಂಸೇವಕರು ಇ – ತ್ಯಾಜ್ಯವನ್ನು ಸಂಗ್ರಹಿಸಿ, ಸುಸ್ಥಿರ ವಿಲೇವಾರಿಯಿಂದ ಬಂದ ಹಣದಿಂದ ಶಾಲೆಯ ಆಟದ ಮೈದಾನದಲ್ಲಿ ಜಾರು ಬಂಡೆ, ತೂಗುಯ್ಯಾಲೆ ಮತ್ತು ಸೀ- ಸಾ (up and down) ಮಾಡಿಸಿಕೊಡಲಾಗಿರುತ್ತದೆ. ನಿಷ್ಕಲ್ಮಶ ಮನಸ್ಸಿನ ಮುಗ್ಧಮಕ್ಕಳ ಮುಖದಲ್ಲಿ ನಗುವನ್ನು ಮೂಡಿಸಲು ಯಶಸ್ವಿಯಾಗಿರುವುದಾಗಿ ಸಂತೋಷವನ್ನು ವ್ಯಕ್ತಪಡಿಸಿದರು. ರೋಟರಾಕ್ಟ್ ಕ್ಲಬ್ ಆಫ್ ಬೆಂಗಳೂರು ನಾಗಸಂದ್ರದ ಅಧ್ಯಕ್ಷ ಪೃಥ್ವಿರಾಜ್. ಎಸ್ ರವರು ಮಾತನಾಡಿ ಎರಡೂ ಕ್ಲಬ್ ನ ಸ್ವಯಂ ಸೇವಕರು 3 ತಿಂಗಳಿಗೂ ಅಧಿಕ ಸಮಯದ ಕಾಲ ಹಲವೆಡೆ ಇ – ತ್ಯಾಜ್ಯದ ಜವಾಬ್ದಾರಿಯುತ ಮರುಬಳಕೆ ಮತ್ತು ವಿಲೇವಾರಿ ಬಗ್ಗೆ ಅರಿವು ಮೂಡಿಸುವ ಜೊತೆಗೆ ಸುಮಾರು 550 ಕೆಜಿಯಷ್ಟು ಇ – ತ್ಯಾಜ್ಯವನ್ನು ಸಂಗ್ರಹಿಸಿ ಅದರ ವಿಲೇವಾರಿಯಿಂದ ಸಂಗ್ರಹಿಸಲಾದ ಹಣದಲ್ಲಿ ಈ ಕಾರ್ಯವನ್ನು ಮಾಡುವಲ್ಲಿ ಸಫಲರಾಗಿದ್ದೇವೆ ಎಂದು ವಿವರಿಸಿ ಸ್ವಯಂ ಸೇವಕರಿಗೆ ತಮ್ಮ ಕೃತಜ್ಞತೆಗಳನ್ನು ತಿಳಿಸಿದರು. ಶಾಲೆಗೆ ವಾಲಿಬಾಲ್, ಫುಟ್ಬಾಲ್, ಥ್ರೋ ಬಾಲ್, ಸ್ನೇಕ್ ಅಂಡ್ ಲ್ಯಾಡರ್, ಟೆನಿಕಾಯಿಟ್, ಕೇರಂ ಬೋರ್ಡ್, ಚೆಸ್ , ಬ್ಯಾಡ್ಮಿಂಟನ್, ಲೋಡೋ , ಮತ್ತುಸ್ಕಿಪ್ಪಿಂಗ್ , ಮಾರ್ಬಲ್ ಸಾಲಿಟರ್ ಇತರೆ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಸಿ. ಆರ್.ಪಿ, ಶರತ್ ಬಾಬು ಮಾತನಾಡಿ ಈ -ತ್ಯಾಜ್ಯ ಸಂಗ್ರಹ ಪರಿಕಲ್ಪನೆಯು ನಿಜಕ್ಕೂ ಅರ್ಥಪೂರ್ಣ ಯೋಜನೆಯಾಗಿದ್ದು, ಕಾಡಂಚಿನ ,ಗ್ರಾಮೀಣ ವಿದ್ಯಾರ್ಥಿಗಳ
ಮತ್ತು ಸ್ಥಳೀಯ ಸಮುದಾಯದ ಜನರಿಗೆ ಸಕಾರಾತ್ಮಕ ಪ್ರಭಾವ ಬೀರಿದ್ದು, ಹಿತ್ತಲದೊಡ್ಡಿ ಶಾಲೆಯ ಈಗಿನ ಮಕ್ಕಳಲ್ಲದೇ ಮುಂಬರುವ ಪೀಳಿಗೆಯು ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದುತಮ್ಮ ಹರ್ಷೋಲ್ಲಾಸವನ್ನು ವ್ಯಕ್ತಪಡಿಸಿ,ಆಯೋಜಕರ ಕೆಲಸವನ್ನು ಶ್ಲಾಘಿಸಿದರು. ರಾಮಯ್ಯ ವಿಶ್ವ ವಿದ್ಯಾಲಯದ ರೋಟ ರಾಕ್ಟ್ ನಿಯೋಜಿತ ಅಧ್ಯಕ್ಷ ಯಶವಂತ ಗೌಡ. ಎಸ್. ಎ.ಮಾತನಾಡಿ ಬೆಂಗಳೂರಿನಿಂದ ಕಾಡಂಚಿನ ಶಾಲೆಗಳಿಗೆ ಈ ಸೌಲಭ್ಯ ಒದಗಿಸಲು, ಸ್ಥಳೀಯ ಅರಣ್ಯ ಇಲಾಖೆಯವರ ನಿರಂತರ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಸಾಧ್ಯವಾಗಿದ್ದು,ಮುಂದಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಸಹಕರಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಮುಖ್ಯಸ್ಥರಾದ ಡಾ. ದಾಮೋದರ್ ನಾಯಕ್ ಎ ಅವರು, “ಈ ಕಾರ್ಯಕ್ರಮವು ಶಾಲಾ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವುದು,ನಮ್ಮ ನಿರಂತರ ಬದ್ಧತೆಯ ಭಾಗವಾಗಿದೆ. ಚಂದನವನ ೨.೦ ಇ – ತ್ಯಾಜ್ಯದ ವಿಲೇವಾರಿಯಿಂದ ನಮ್ಮ ಭೂಮಿಯ ರಕ್ಷಣೆಗೆ ಅಳಿಲು ಸೇವೆ ಮಾಡುವುದರೊಂದಿಗೆ ,ಪ್ರತಿಯೊಬ್ಬ ಮಗುವಿಗೂ ಅಗತ್ಯವಾದ ಆಟೋಟ ಚಟುವಟಿಕೆಗಳಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿಒಂದು ಮಹತ್ವದ ಹೆಜ್ಜೆಯಾಗಿದೆ. ಈ ಸಂಯುಕ್ತ ಪ್ರಯತ್ನವು ಸ್ವಯಂ ಸೇವಕರು ನಿಸ್ವಾರ್ಥ ಸೇವೆಯಿಂದ ಪರೋಕ್ಷ ಪರಿಸರ ಸಂರಕ್ಷಣೆಯಾಗುತ್ತಿದ್ದು ಎಲ್ಲರೂ ಈ ಕ್ರಮವನ್ನು ಅನುಸರಿಸಬೇಕೆಂದು ಕರೆ ನೀಡಿದರು. ಮ್ಯೂಸಿಕಲ್ ಚೇರ್,ಲೆಮನ್ ಅಂಡ್ ಸ್ಪೋನ್,ಕಪ್ಪೆ ಓಟ,ಕೆರೆ ದಡ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಸಹ ಪ್ರಾಧ್ಯಾಪಕರಾದ ಡಾ. ಪರಶುರಾಮನ್ ಹಾಗೂ ಉಪ ವ್ಯವಸ್ಥಾಪಕರಾದ ಶಿವರಾಜ್ ಕುಮಾರ್ ಎಂ.ಬಿ.,ಅಲ್ಮಾ ಖಾನ್, ಶ್ರೀಜಾ ,ಯಶವಂತ್ ಗೌಡಎಸ್.ಎ. ಪರೀಕ್ಷಾರ್ಥ,ಡಾ.ರಾಮಕೃಷ್ಣ
ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಶೋಯಬ್ ಪಾಷಾ, ಗ್ರಾಮ ಪಂಚಾಯಿತಿ ಸದಸೈಕಮಲಮ್ಮ, ಮರಿಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿದ್ದರಾಜು,ಶಿವಾನಂದಯ್ಯ ನಿಲಯ ಪಾಲಕರು, ಗೋವಿಂದ ಶೆಟ್ಟಿ, ನಾಗಣ್ಣ, ಮುಖ್ಯ ಶಿಕ್ಷಕ ಕೆಂಪರಾಜು, ರಾಜೇಂದ್ರ, ಮಹಮದ್ ಬಿಲಾಲ್, ಮೋಹಿತ್ ಪಾಂಡೆ, ಪ್ರತಾಪ್, ಜೋಶ್ನಾ, ಯಶವಂತ ,ಅಲೋಕ್, ಶ್ರೀಯುಕ್ತ,ವಿರಾಜ್, ತೇಜಸ್, ಪೂರ್ಣಚಂದ್ರ, ಚರಣ್ ರಾಜ್, ದಾನೇಶ್ವರಿ, ಗಸ್ತು ಅರಣ್ಯಪಾಲಕರಾದ ಸುನಿಲ್ ಬಸಪ್ಪ ಬೆಳವಿ, ಸಂಜುನಾಥ ಆಯಟ್ಟಿ, ರಾಜು ಎಸ್, ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ, ಜಯದೇವ್,ಸತೀಶ್, ಸಂತೋಷ್, ಶೇಖರ್,ಮಹೇಶ್ ಕುಮಾರ್, ರವಿ, ಆನಂದ, ಮಾದೇಶ್, ಮಾದೇವ, ಕೆಂಪರಾಜು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.





