
ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಾರ್ಚ್ 27ರ ಶುಕ್ರವಾರ ಸಂಜೆ 5:30ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶ್ರೀರಾಮ ಮತ್ತು ರಾಮಾಯಣದ ಕುರಿತು ಕವಿಗೋಷ್ಠಿ ಹಾಗೂ ಕನ್ನಡದ ಭಕ್ತಿ ಗೀತೆಗಳು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರಾದ ಬಿಕೆ ದಾನೇಶ್ವರಿ ರವರು ವಹಿಸುವರು.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಉಳಿಸುವವರು. ಉದ್ಘಾಟನೆಯನ್ನು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ನೆರವೇರಿಸುವರು.
ಪುಷ್ಪಾರ್ಚನೆಯನ್ನು ಮಾಜಿ ನಗರಸಭಾ ಸದಸ್ಯರಾದ ಗಾಯತ್ರಿ ಚಂದ್ರಶೇಖರ್ ನೆರವೇರಿಸುವರು.
ಕನ್ನಡದ ಭಕ್ತಿ ಗೀತೆಗಳ ಗೀತ ಗಾಯನ ಕಾರ್ಯಕ್ರಮವನ್ನು ಜ.ಸುರೇಶ್ ನಾಗ್ ಹರದನಹಳ್ಳಿ ಮತ್ತು ತಂಡದವರು ನೀಡಲಿದ್ದಾರೆ.
ಕನ್ನಡ ಸಂಘಟನೆಗಳ ಮುಖ್ಯಸ್ಥರು,ಕವಿಗಳು, ಕಲಾವಿದರು ಆಗಮಿಸಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರ ಪ್ರಸಾದ್ ಹಾಗೂ ಆರಾಧ್ಯರವರು ತಿಳಿಸಿದ್ದಾರೆ.





