ಚಿಕ್ಕಮಗಳೂರು: ನಗರದ ಅರವಿಂದನಗರ ಬಡಾವಣೆಯಲ್ಲಿ ನಾಗಾಲ್ಯಾಂಡ್ ಮೂಲದ 22 ವರ್ಷದ ಲುನ್ಸುಲಾ ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಗ್ಲೋಬಲ್ ವಿಲೇಜ್ ರೆಸಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದ ಲುನ್ಸುಲಾ, ಸಾವಿಗೆ ಮೊನ್ನೆ ಸಂಜೆ ಕಿವಿಶೆ ಕಿನಿಮಿ ಜೊತೆ ಅರ್ಧ ಗಂಟೆ ಮಾತನಾಡಿದ್ದಾಗಿ ತಿಳಿದುಬಂದಿದೆ. ಈ ಸಂಬಂಧ ಲಶಿಲಾ ಇಂಚುಗರ್ ಅವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಜೇಶ್ ಹಾಗೂ ತೇಜಸ್ ಎಂಬ ಇಬ್ಬರ ಮೇಲೆ ಮಾನಸಿಕ ಹಿಂಸೆ ನೀಡಿದ ಆರೋಪ ಮಾಡಿದ್ದಾರೆ. ಮೃತ ಲುನ್ಸುಲಾ ಅವರ ವೈಯಕ್ತಿಕ ಡೈರಿಯಲ್ಲೂ ಈ ಇಬ್ಬರ ಹೆಸರು ಉಲ್ಲೇಖಗೊಂಡಿರುವುದಾಗಿ ತಿಳಿದುಬಂದಿದೆ. ಘಟನೆ ಕುರಿತು ಬಸವನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
