
ಸಾಗರ : ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯೊಂದಾದ ತಲವಾಟ ಗ್ರಾಮದಲ್ಲಿ ಕಳೆದ ಸುಮಾರು ಮೂರು ವರ್ಷಗಳಿಂದ ಊರಿನ ಹೆಸರಿನ ಫಲಕ ಇಲ್ಲದಿರುವುದರಿಂದ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಬಸ್ ನಿಲ್ದಾಣ, ಅಂಚೆ ಸೇವೆ ಹಾಗೂ ಊರಿಗೆ ಬರುವ ಬಂಧು–ಮಿತ್ರರಿಗೆ ಗ್ರಾಮವನ್ನು ಗುರುತಿಸುವುದು ಕಷ್ಟಕರವಾಗಿತ್ತು. ಈ ಕುರಿತು ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯತ್ ಹಾಗೂ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಳ್ಳಲಾಗಿರಲಿಲ್ಲ, ಬಳಿಕ ವಿಷಯವನ್ನು “ಜೈ ಟಿವಿ” ಪ್ರಸಾರ ಮಾಡುತ್ತಿದ್ದಂತೆ ಸಂಬಂಧಿತ ಇಲಾಖೆ ಸ್ಪಂದಿಸಿ ಕ್ರಮ ಕೈಗೊಂಡಿದ್ದು, ಇದೀಗ ತಲವಾಟ ಗ್ರಾಮ ಪ್ರವೇಶದ್ವಾರದಲ್ಲಿ ಸ್ಪಷ್ಟವಾಗಿ ಕಾಣುವಂತೆ ತಲವಾಟ ಹೆಸರಿನ ಬೋರ್ಡ್ ಅಳವಡಿಸಲಾಗಿದೆ. ಗ್ರಾಮಸ್ಥರು ತಮ್ಮ ಒಗ್ಗಟ್ಟಿನ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದರು. ಮಾಧ್ಯಮದ ವರದಿಗೆ ಸ್ಪಂದಿಸಿದ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಜೈಟಿವಿ ಅಭಿನಂದನೆ ಸಲ್ಲಿಸುತ್ತದೆ.




