ಬೆಂಗಳೂರು: ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಖಾಸಗಿ ಸ್ಲೀಪರ್ ಬಸ್ ಮಾಲೀಕರು, ಬಸ್ ಕೋಚ್ ನಿರ್ಮಾಣ ಕಂಪನಿಗಳ ಮಾಲೀಕರು ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುವ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ಎಮರ್ಜೆನ್ಸಿ ಡೋರ್, ಫೈರ್ ಎಸ್ಟಿಂಗ್ ಸಾಧನ, ಬಸ್ ಸೀಟಿಂಗ್ ವ್ಯವಸ್ಥೆ, ಎಸಿ ಬಸ್ಗಳಲ್ಲಿ ಬೆಂಕಿ ಕಂಡಾಗ ತೆಗೆದುಕೊಳ್ಳಬೇಕಾದ ಕ್ರಮ, ಡೋರ್ ಜಂಪ್ ಮಾಡಲು ಮೆಟ್ಟಿಲು, ಗ್ಲಾಸ್ ಹ್ಯಾಮರ್ಗಳ ಅಳವಡಿಕೆ, ಚಾಲಕರ ಹಿಂಬದಿ ಡೋರ್ ಮತ್ತು ಸ್ಲೀಪರ್ ಬರ್ತ್ಗಳ ಸ್ಲೈಡರ್ಗಳ ವ್ಯವಸ್ಥೆ, ಬೆಂಕಿ ಶಾಮಕ ಸಾಧನ ಮತ್ತು ಡ್ರೈವರ್ ಅಲಾರಂ ವ್ಯವಸ್ಥೆ ಸೇರಿದಂತೆ ಹಲವು ಸೂಚನೆಗಳನ್ನು ನೀಡಿದ್ದು, ಚಾಲಕರ ಹಿಂಬದಿ ಡೋರ್ ತೆಗೆಯಬೇಕು, ಸ್ಲೀಪರ್ ಬರ್ತ್ಗಳಲ್ಲಿ ಸ್ಲೈಡರ್ ಇರಬೇಕು, ಫೈರ್ ಡಿಟೆಕ್ಷನ್ ಸಾಧನ ತಿಂಗಳೊಳಗೆ ಅಳವಡಿಸಬೇಕು, 10 ಕೆಜಿ ತೂಕದ ಅಗ್ನಿ ಶಾಮಕ ಸಾಧನ ಕಡ್ಡಾಯ, ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್, ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣಪತ್ರ ಕಡ್ಡಾಯ, ಪ್ರಯಾಣಿಕರ ಸುರಕ್ಷತಾ ಮಾನದಂಡ ಪೂರೈಸಿದ ಬಳಿಕ ಮಾತ್ರ ಎಫ್ ಸಿ ನೀಡಬೇಕು ಮತ್ತು ಬಸ್ ಕವಚ ನಿರ್ಮಾಣ ಸಂಸ್ಥೆ ಪರಿಶೀಲನೆಯ ನಂತರ ಮಾತ್ರ ನೋಂದಣಿ ಮಾಡಬೇಕು.ಅಂತಿಮವಾಗಿ ಖಾಸಗಿ ಸ್ಲೀಪರ್ ಬಸ್ಗಳಲ್ಲಿ ಈ ನಿಯಮಗಳ ಕಡ್ಡಾಯ ಪಾಲನೆ ಮಾಡಬೇಕೆಂದು ಖಡಕ್ ಸೂಚನೆ ನೀಡಲಾಗಿದೆ:
