ಶೃಂಗೇರಿ: ಆರ್.ಎಸ್.ಎಸ್ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಾಲ್ಲೂಕಿನ 6 ಗ್ರಾ. ಪಂ ವ್ಯಾಪ್ತಿಯಲ್ಲಿ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದೆ. ಫೆ.3ರಂದು ಸಂಜೆ ಜ್ಞಾನಭಾರತಿ ವಿದ್ಯಾಕೇಂದ್ರದ ಮುಂಭಾಗದಲ್ಲಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಚೋಳರ ಮನೆ ಪ್ರದೀಪ್ ತಿಳಿಸಿದ್ದಾರೆ. 22ರಂದು ಕಿಗ್ಗಾದಲ್ಲಿ ಶ್ರೀ ಅಭಿನವ ರಮಾನಂದ ಪ್ರೌಢಶಾಲೆಯ ಸಮೀಪ ನಡೆಯುವ ಕಾರ್ಯಕ್ರಮದಲ್ಲಿ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. 25ರಂದು ಕಾವಡಿಯಲ್ಲಿ, 31ರಂದು ಮರಿಗೆಬೈಲು, ಫೆ. 1ರಂದು ಕಲ್ಕಟ್ಟೆ ಹಾಗೂ ಫೆ.2ರಂದು ನೆಮ್ಮಾರಿನಲ್ಲಿ ಮದ್ಯಾಹ್ನ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು. ಸೈದ್ಧಾಂತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಆರ್.ಎಸ್.ಎಸ್, ನಿಸ್ವಾರ್ಥ ಸೇವೆಯ ಮೂಲಕ ದೇಶಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಗ್ರಾಮ ಮಟ್ಟದಲ್ಲೂ ರಾಷ್ಟ್ರೀಯತೆ ಬಲಪಡಿಸಲು ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದು ಆಯೋಜನಾ ಸಮಿತಿ ಉಪಾಧ್ಯಕ್ಷ ಕೆ. ಶ್ರೀಕಾಂತ್ ತಿಳಿಸಿದರು. ಉಪಾಧ್ಯಕ್ಷ ನಾಗೇಶ್ ಕಾಮತ್, ಆಯೋಜನ ಸಮಿತಿ ಸದಸ್ಯ ಕೆ.ಎನ್ ಗೋಪಾಲ್ ದಿವೀರ್ ಮಲ್ನಾಡ್, ನಂದಕುಮಾರ್, ಶಾಮಣ್ಣ ಭಂಡಾರಿ, ಸುಧೀಂದ್ರ ಬೆಟ್ಟಗದ್ದೆ, ಸುಮಂಗಲಿ ಆನಂದಸ್ವಾಮಿ, ಅನಿರುದ್ದ್ ಕೊರಡಕಲ್ಲು, ವೆಂಕಪ್ಪ ಆಚಾರ್ಯ ಇದ್ದರು.
