ಮಂಗಳೂರು: ಕೆಂಪು ಕಲ್ಲು ಹಾಗೂ ಮರಳಿನ ಕೊರತೆಯಿಂದಾಗಿ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆಯನ್ನು ಮಾಡಿದ್ದಾರೆ. ಅಂಬೆಡ್ಕರ್ ವೃತ್ತದಿಂದ ಕ್ಲಾಕ್ ಟವರ್ವರೆಗೆ ಮಳೆಯಲ್ಲಿಯೇ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಡಳಿತ, ಸರಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದ್ದಾರೆ. ಕಾರ್ಮಿಕರಿಗೆ ಕೆಂಪು ಕಲ್ಲು, ಮರಳು ಇಲ್ಲದೇ ಕೆಲಸಗಳು ನಿಂತು ಹೋಗಿದ್ದು, ಕೆಲಸವಿಲ್ಲದೆ ಪರದಾಡುವಂತಾಗಿದೆ. ಕೂಡಲೇ ಸಮಸ್ಯೆಗೆ ಪರಿಹಾರದ ರೀತಿಯಲ್ಲಿ ಕೆಂಪು ಕಲ್ಲು ಹಾಗೂ ಮರಳಿನ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಯಾದವ ಶೆಟ್ಟಿ, ವಸಂತ ಆಚಾರಿ, ರವಿಚಂದ್ರ, ಯೋಗಿಶ್ಮೊ ಜಪ್ದಪಿನ ಮೊಗರು, ಕೇಶವ ಬಂಗೇರ, ಕರುಣಾಕರ್ ಜನಾರ್ದನ್ ಕುತ್ತೂರು ಇತರರು ಉಪಸ್ಥಿತರಿದ್ದರು.
